ADVERTISEMENT

ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿಗಳು 25: ಮುದ್ರಣ 500ಕ್ಕೂ ಹೆಚ್ಚು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2025, 11:25 IST
Last Updated 24 ಸೆಪ್ಟೆಂಬರ್ 2025, 11:25 IST
<div class="paragraphs"><p>ಎಸ್.ಎಲ್. ಭೈರಪ್ಪ</p></div>

ಎಸ್.ಎಲ್. ಭೈರಪ್ಪ

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಗತಜನ್ಮದಿಂದ ಆರಂಭಗೊಂಡು ಉತ್ತರಕಾಂಡದವರೆಗೂ ಹಿರಿಯ ಸಾಹಿತಿ ಎಸ್.ಎಲ್‌.ಭೈರಪ್ಪ ಅವರು 25ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಹಲವು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಂಗಾಳಿ ಸಹಿತ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅದರಲ್ಲೂ ಭೈರಪ್ಪ ಅವರ ಒಂದೊಂದು ಕಾದಂಬರಿಯೂ ಹಲವು ಮುದ್ರಣಗಳನ್ನು ಕಂಡು ದಾಖಲೆಗಳನ್ನು ಬರೆದಿವೆ.

ADVERTISEMENT

ಗತಜನ್ಮ– ಮತ್ತೆರಡು ಕತೆಗಳು: 1955ರಲ್ಲಿ ಪ್ರಕಟಗೊಂಡ ಈ ಕಾದಂಬರಿ ಈವರೆಗೂ ಒಂಬತ್ತು ಮುದ್ರಣಗಳನ್ನು ಕಂಡಿದೆ.

ಭೀಮಕಾಯ: 1958ರಲ್ಲಿ ಪ್ರಕಟಗೊಂಡ ಈ ಕಾದಂಬರಿ 2024ರವರೆಗೂ 13 ಮುದ್ರಣಗಳನ್ನು ಕಂಡಿದೆ.

ಬೆಳಕು ಮೂಡಿತು: 1959ರಲ್ಲಿ ಪ್ರಕಟಗೊಂಡ ಈ ಕಾದಂಬರಿ ನಾಲ್ಕು ಮುದ್ರಣಗಳನ್ನು ಕಂಡಿದೆ

ಧರ್ಮಶ್ರೀ: 1961ರಲ್ಲಿ ಪ್ರಕಟಗೊಂಡ ಈ ಕಾದಂಬರಿ 24 ಮುದ್ರಣಗಳನ್ನು ಕಂಡಿದೆ.

ದೂರ ಸರಿದರು: 1962ರಲ್ಲಿ ಪ್ರಕಟಗೊಂಡ ಈ ಕಾದಂಬರಿ ಈವರೆಗೂ 25 ಮುದ್ರಣಗಳನ್ನು ಕಂಡಿದೆ

ಮತದಾನ: 1965ರಲ್ಲಿ ಪ್ರಕಟಗೊಂಡ ಮತದಾನ ಕಾದಂಬರಿ 21 ಮುದ್ರಣಗಳನ್ನು ಕಂಡಿದೆ

ವಂಶವೃಕ್ಷ: 1965ರಲ್ಲಿ ಪ್ರಕಟಗೊಂಡ ವಂಶವೃಕ್ಷ ಅತಿಹೆಚ್ಚು ಬೇಡಿಕೆಯ ಕಾದಂಬರಿ. ಇದು 35 ಮುದ್ರಣಗಳನ್ನು ಕಂಡಿದೆ.

ಜಲಪಾತ: 1967ರಲ್ಲಿ ಪ್ರಕಟಗೊಂಡ ಈ ಕಾದಂಬರಿ 19 ಮುದ್ರಣಗಳನ್ನು ಕಂಡಿದೆ.

ನಾಯಿ– ನೆರಳು: 1968ರಲ್ಲಿ ಪ್ರಕಟಗೊಂಡ ಕಾದಂಬರಿ 33 ಮುದ್ರಣಗಳನ್ನು ಕಂಡಿದೆ

ತಬ್ಬಲಿಯು ನೀನಾದೆ ಮಗನೆ: ಸಿನಿಮಾ ಆಗಿಯೂ ಸಾಕಷ್ಟು ಜನಪ್ರಿಯತೆ ಪಡೆದ ತಬ್ಬಲಿಯು ನೀನಾದೆ ಮಗನೆ ಕಾದಂಬರಿ 1968ರಲ್ಲಿ ಪ್ರಕಟಗೊಂಡಿತು. ಅಲ್ಲಿಂದ 20 ಬಾರಿ ಮರು ಮುದ್ರಣಗೊಂಡಿದೆ

ಗೃಹಭಂಗ: ಟಿ.ವಿ. ಧಾರಾವಾಹಿಯಾಗಿಯೂ ಜನಪ್ರಿಯಗೊಂಡ ಭೈರಪ್ಪ ಅವರ ಗೃಹಭಂಗ ಕಾದಂಬರಿ 1970ರಲ್ಲಿ ಪ್ರಕಟಗೊಂಡಿತು. ಅಲ್ಲಿಂದ 29 ಮುದ್ರಣಗಳನ್ನು ಕಂಡಿದೆ. 

ನಿರಾಕರಣ: 1971ರಲ್ಲಿ ಪ್ರಕಟಗೊಂಡ ನಿರಾಕರಣ ಕಾದಂಬರಿಯು 2025ರವರೆಗೂ 25 ಮುದ್ರಣಗಳನ್ನು ಕಂಡಿದೆ.

ಗ್ರಹಣ: 1972ರಲ್ಲಿ ಪ್ರಕಟಗೊಂಡ ಗ್ರಹಣ ಕಾದಂಬರಿಯು 18 ಬಾರಿ ಮರುಮುದ್ರಣಗೊಂಡಿದೆ

ದಾಟು: 1973ರಲ್ಲಿ ಪ್ರಕಟಗೊಂಡ ದಾಟು ಕಾದಂಬರಿಯು 27 ಬಾರಿ ಮರುಮುದ್ರಣಗೊಂಡಿದೆ

ಅನ್ವೇಷಣ: 1976ರಲ್ಲಿ ಪ್ರಕಟಗೊಮಡ ಅನ್ವೇಷಣ ಕಾದಂಬರಿಯು 22 ಬಾರಿ ಮುದ್ರಣಗೊಂಡಿದೆ

ಪರ್ವ: 1979ರಲ್ಲಿ ಪ್ರಕಟಗೊಂಡ ಮಹಾಭಾರತ ಆಧಾರಿತ ಪರ್ವ ಕಾದಂಬರಿಯು ಬರೋಬ್ಬರಿ 36 ಬಾರಿ ಮರುಮುದ್ರಣಗೊಂಡಿದೆ

ನೆಲೆ: 1983ರಲ್ಲಿ ಪ್ರಕಟಗೊಂಡ ನೆಲೆ ಕಾದಂಬರಿಯು 18 ಬಾರಿ ಮುದ್ರಣಗೊಂಡಿದೆ

ಸಾಕ್ಷಿ: 1986ರಲ್ಲಿ ಪ್ರಕಟಗೊಂಡ ಈ ಕಾದಂಬರಿಯು 17 ಬಾರಿ ಮುದ್ರಣಗೊಂಡಿದೆ

ಅಂಚು: 1990ರಲ್ಲಿ ಪ್ರಕಟಗೊಂಡ ಅಂಚು ಕಾದಂಬರಿ 16 ಬಾರಿ ಮುದ್ರಣಗೊಂಡಿದೆ

ತಂತು: 1993ರಲ್ಲಿ ಪ್ರಕಟಗೊಂಡ ತಂತು ಕಾದಂಬರಿ 13 ಬಾರಿ ಮುದ್ರಣಗೊಂಡಿದೆ

ಭಿತ್ತಿ: ಆತ್ಮವೃತಾಂತವಾದ ಭಿತ್ತಿ 1996ರಲ್ಲಿ ಪ್ರಕಟಗೊಂಡಿತು. ಅಲ್ಲಿಂದ ಒಟ್ಟು 18 ಮುದ್ರಣ ಕಂಡಿದೆ

ಸಾರ್ಥ: 1998ರಲ್ಲಿ ಪ್ರಕಟಗೊಂಡ ಸಾರ್ಥ 23 ಬಾರಿ ಮರು ಮುದ್ರಣಗೊಂಡಿದೆ

ಮಂದ್ರ: 2002ರಲ್ಲಿ ಪ್ರಕಟಗೊಂಡ ಈ ಕಾದಂಬರಿ 21 ಬಾರಿ ಮುದ್ರಣಗೊಂಡಿದೆ

ಆವರಣ: 2007ರಲ್ಲಿ ಪ್ರಕಟಗೊಂಡ ಆವರಣ ಒಟ್ಟು 74 ಮುದ್ರಣಗಳನ್ನು ಕಂಡಿದೆ. 2007ರಲ್ಲೇ 14 ಬಾರಿ ಮುದ್ರಣಗೊಂಡರೆ, 2008ರಲ್ಲಿ 15 ಬಾರಿ ಮರು ಮುದ್ರಣಗೊಂಡಿದೆ

ಕವಲು: 2010ರಲ್ಲಿ ಭೈರಪ್ಪ ಅವರು ರಚಿಸಿದ ಕವಲು ಕಾದಂಬರಿಯು 15 ಮುದ್ರಣಗಳನ್ನು ಕಂಡಿದೆ

ಯಾನ: 2014ರಲ್ಲಿ ರಚಿಸಿದ ಯಾದ ಒಟ್ಟು 10 ಬಾರಿ ಮುರುಮುದ್ರಣಗೊಂಡಿದೆ.

ಉತ್ತರಕಾಂಡ: 2017ರಲ್ಲಿ ಪ್ರಕಟವಾದ ಭೈರಪ್ಪ ಅವರ ಈ ಕಾದಂಬರಿಯು ಹಲವು ಮುದ್ರಣಗಳನ್ನು ಕಂಡಿದೆ. 

ಭೈರಪ್ಪ ಅವರ ಸಾಹಿತ್ಯ ಚಿಂತನ ಕೃತಿಗಳು

ಸತ್ಯ ಮತ್ತು ಸೌಂದರ್ಯ: 1966ರಲ್ಲಿ ಪ್ರಕಟಗೊಂಡ ಈ ಕೃತಿ 10 ಬಾರಿ ಮುದ್ರಣಗೊಂಡಿದೆ

ಸಾಹಿತ್ಯ ಮತ್ತು ಪ್ರತೀಕ: 1967ರಲ್ಲಿ ಪ್ರಕಟಗೊಂಡು ಒಟ್ಟು 7 ಬಾರಿ ಮರುಮುದ್ರಣವಾಗಿದೆ

ಕಥೆ ಮತ್ತು ಕಥಾವಸ್ತು: 1969ರಲ್ಲಿ ಪ್ರಕಟಗೊಂಡ ಈ ಕೃತಿ 7 ಮುದ್ರಣ ಕಂಡಿದೆ

ನಾನೇಕೆ ಬರೆಯುತ್ತೇನೆ?: 1980ರಲ್ಲಿ ಪ್ರಕಟಗೊಂಡ ಭೈರಪ್ಪ ಅವರ ಈ ಕೃತಿ 15 ಬಾರಿ ಮುದ್ರಣಗೊಂಡಿದೆ

ಸಾಕ್ಷಿ ಪರ್ವ: 2019ರ ಈ ಕೃತಿ ಮೂರು ಬಾರಿ ಮುದ್ರಣಗೊಂಡಿದೆ

ಇತರೆ ಭಾಷೆಗಳಿಗೆ ಅನುವಾದಗೊಂಡ ಭೈರಪ್ಪ ಅವರ ಕೃತಿಗಳು

ಧರ್ಮಶ್ರೀ: ಸಂಸ್ಕೃತ, ಮರಾಠಿ

ವಂಶವೃಕ್ಷ: ತೆಲುಗು, ಮರಾಠಿ, ಹಿಂದಿ, ಉರ್ದು, ಇಂಗ್ಲೀಷ್

ನಾಯಿ– ನೆರಳು: ಗುಜರಾತಿ, ಹಿಂದಿ

ತಬ್ಬಲಿಯು ನೀನಾದೆ ಮಗನೆ: ಹಿಂದಿ

ಗೃಹಭಂಗ: ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ

ನಿರಾಕರಣ: ಹಿಂದಿ

ದಾಟು: ಇಂಗ್ಲೀಷ್, ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ

ಅನ್ವೇಷಣ: ಹಿಂದಿ, ಮರಾಠಿ

ಪರ್ವ: ಹಿಂದಿ, ಮರಾಠಿ, ಇಂಗ್ಲೀಷ್, ತೆಲುಗು, ಬೆಂಗಾಲಿ, ತಮಿಳು

ನೆಲೆ: ಹಿಂದಿ

ಸಾಕ್ಷಿ: ಹಿಂದಿ, ಇಂಗ್ಲೀಷ್

ಅಂಚು: ಹಿಂದಿ, ಮರಾಠಿ

ತಂತು: ಹಿಂದಿ, ಮರಾಠಿ

ಸಾರ್ಥ: ಹಿಂದಿ, ಮರಾಠಿ, ಇಂಗ್ಲೀಷ್, ಸಂಸ್ಕೃತ

ನಾನೇಕೆ ಬರೆಯುತ್ತೇನೆ: ಮರಾಠಿ

ಸತ್ಯ ಮತ್ತು ಸೌಂದರ್ಯ: ಇಂಗ್ಲೀಷ್

ಭಿತ್ತಿ: ಹಿಂದಿ, ಮರಾಠಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.