ದ್ವಿಚಕ್ರ ವಾಹನ
(ಐಸ್ಟೋಕ್ ಚಿತ್ರ)
ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಜಿಎಸ್‌ಟಿ ಮಂಡಳಿಯು ಒಪ್ಪಿಗೆ ನೀಡಿದೆ. ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ದಸರಾ ಭರ್ಜರಿ ಉಡುಗೊರೆ ನೀಡಿದೆ.
'ನೆಕ್ಸ್ಟ್-ಜೆನ್ ಜಿಎಸ್‌ಟಿ ಪರಿಷ್ಕರಣೆ' - ಯಾವೆಲ್ಲ ವಾಹನಗಳು ಅಗ್ಗ?
*ಶೇ 28ರಷ್ಟು ತೆರಿಗೆ ಶೇ18ಕ್ಕೆ ಇಳಿಕೆ:
*1,200 ಸಿ.ಸಿಗಿಂತ ಕಡಿಮೆ ಸಾಮರ್ಥ್ಯದ ಹಾಗೂ 4 ಸಾವಿರ ಎಂ.ಎಂಗಿಂತ ಹೆಚ್ಚು ಉದ್ದ ಇರದ ಪೆಟ್ರೋಲ್, ಎಲ್‌ಪಿಜಿ ಹಾಗೂ ಸಿಎನ್‌ಜಿ ವಾಹನಗಳ ಮೇಲಿನ ಶೇ 28ರಷ್ಟು ತೆರಿಗೆ ಶೇ18ಕ್ಕೆ ಇಳಿಕೆ
*1,500 ಸಿ.ಸಿ ವರೆಗಿನ ಹಾಗೂ 4 ಸಾವಿರ ಎಂ.ಎಂ ಉದ್ದದ ಡಿಸೇಲ್ ವಾಹನಗಳಿಗೂ ಶೇ 18ರಷ್ಟು ತೆರಿಗೆ. ಸದ್ಯ ಇವುಗಳ ಮೇಲೆಯೂ ಶೇ 28ರಷ್ಟು ತೆರಿಗೆ ಇದೆ
*350 ಸಿ.ಸಿ ವರೆಗಿನ ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಶೇ 28ರಿಂದ ಶೇ 18ಕ್ಕೆ ಇಳಿಕೆ
*ಸರಕು ಸಾಗಣೆ ವಾಹನಗಳ ಮೇಲಿನ ತೆರಿಗೆಯು ಶೇ 28ರಿಂದ ಶೇ 18ಕ್ಕೆ ಇಳಿಕೆ
*ಸಣ್ಣ ಹೈಬ್ರಿಡ್ ಕಾರುಗಳಿಗೂ ಪ್ರಯೋಜನ
*ವಿದ್ಯುತ್ ಚಾಲಿತ ವಾಹನಗಳ ಮೇಲಿನ ಶೇ 5ರ ತೆರಿಗೆ ಮುಂದುವರಿಕೆ
*1,200 ಸಿ.ಸಿ ಗಿಂತ ಹೆಚ್ಚು ಸಾಮರ್ಥ್ಯದ ಪೆಟ್ರೋಲ್ ಕಾರುಗಳು, 1,500 ಸಿ.ಸಿಗಿಂತ ಅಧಿಕ ಸಾಮರ್ಥ್ಯದ ಡಿಸೇಲ್ ಕಾರುಗಳಿಗೆ ಶೇ 40ರಷ್ಟು ತೆರಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.