ADVERTISEMENT

Sankranti 2026: ಸೌಂದರ್ಯ ಲೋಕದಲ್ಲಿ ಹೆಂಗಳೆಯರ ಗಮನ ಸೆಳೆದ ರೆಟ್ರೊ ಲುಕ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜನವರಿ 2026, 7:56 IST
Last Updated 14 ಜನವರಿ 2026, 7:56 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಎಐ ಚಿತ್ರ

ದಿನದಿಂದ ದಿನಕ್ಕೆ ಫ್ಯಾಷನ್‌ ಲೋಕ ಬದಲಾಗುತ್ತಿದೆ. ಇದೀಗ ಹಬ್ಬದ ಟ್ರೆಂಡ್‌ ಕೂಡ ಚೇಂಜ್‌ ಆಗಿದೆ. ಹಿಂದಿನ ಕಾಲದ ಸಾಂಪ್ರದಾಯಿಕ ಹಾಗೂ ರೆಟ್ರೊ ಲುಕ್‌ಗಳು ಮತ್ತೆ ಮುನ್ನೆಲೆಗೆ ಬಂದಿವೆ. ರೆಟ್ರೊ ಲುಕ್‌ಗಳಿಗೆ ಈಗಿನ ಕಾಲಕ್ಕೆ ತಕ್ಕಂತೆ ಕೊಂಚ ಬದಲಾವಣೆ ಮಾಡಿಕೊಂಡಿರುವ ಫ್ಯಾಷನ್ ಪ್ರಿಯರು ಅದನ್ನೇ 'ನ್ಯೂ ಟ್ರೆಡಿಷನಲ್ ಲುಕ್‌' ಎನ್ನುತ್ತಿದ್ದಾರೆ. ಅಜ್ಜಿ–ಅಮ್ಮಂದಿರ ಕಾಲದಲ್ಲಿ ಜನಪ್ರಿಯವಾಗಿದ್ದ ಅಲಂಕಾರಗಳು ಈಗ ಹೊಸ ಆಯಾಮ ಪಡೆದುಕೊಂಡಿವೆ. ಈ ಬದಲಾವಣೆಗೆ ಹಬ್ಬಗಳೇ ಪ್ರಮುಖ ಕಾರಣ. ಏಕೆಂದರೆ ಈಗಂತೂ ಪ್ರತಿಯೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡುವುದೆಂದರೆ ಆದರಲ್ಲೂ ಮಹಿಳೆಯರಿಗೆ ಹಾಗೂ ಯುವತಿಯರಿಗೆ ಎಲ್ಲಿಲ್ಲದ ಸಂಭ್ರಮ. ಹೀಗಾಗಿಯೇ ಹಬ್ಬ ಎಂದ ಕೂಡಲೇ ಸಾಂಪ್ರದಾಯಿಕ ಲುಕ್‌ಗಳಲ್ಲಿ ಫೋಟೊ ಕ್ಲಿಕಿಸಿಕೊಂಡು ಹಬ್ಬದ ಟ್ಯಾಗ್‌ಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಾರೆ. ಇದೇ ಹಳೆ–ಹೊಸ ಟ್ರೆಂಡ್‌ಗಳ ಜೋಡಣೆಗೆ ಕಾರಣವಾಗಿದೆ.

ADVERTISEMENT
ರೆಟ್ರೊ ಮೋಡಿ

ಹಳೆಯ ಕಾಲದ ಅಲಂಕಾರಗಳೇ ಇಂದಿನ ಫ್ಯಾಷನ್‌ನ ಹೈಲೈಟ್‌. ಮಲ್ಲಿಗೆ ಹೂವಿನ ಜಡೆ, ದೊಡ್ಡ ಬಿಂದಿ, ಕುಂಕುಮದ ಬಳಕೆ, ಕಿವಿಗೆ ಜುಮುಕಿ ಆಭರಣಗಳು ಮಹಿಳೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಅತಿಯಾದ ಮೇಕಪ್‌ ಬದಲು ನ್ಯಾಚುರಲ್‌ ಲುಕ್‌, ಕಣ್ಣಿಗೆ ಕಾಜಲ್‌, ತುಟಿಗಳಿಗೆ ಲೈಟ್‌ ಕಲರ್‌ ಲಿಪ್‌ಸ್ಟಿಕ್‌—ಇವೆಲ್ಲವೂ ರೆಟ್ರೊ ಶೈಲಿ ಉಡುಪುಗಳಿಗೆ ಮ್ಯಾಚ್‌ ಆಗುತ್ತವೆ.

ಪ್ರಾತಿನಿಧಿಕ ಚಿತ್ರ 

ಸಾಂಪ್ರದಾಯಿಕ ಉಡುಗೆಯತ್ತ ಫ್ಯಾಷನ್‌ ಜಗತ್ತು ವಾಪಸ್!

ಮಹಿಳೆಯರು ಕಾಂಚೀವರಂ, ಮೈಸೂರು ಸಿಲ್ಕ್‌, ಇಳಕಲ್‌ ಸೀರೆಗಳತ್ತ ಮತ್ತೆ ಮುಖ ಮಾಡಿದ್ದಾರೆ. ಹಿಂದಿನ ಕಾಲದಲ್ಲಿ ಜನಪ್ರಿಯವಾಗಿದ್ದ ಗಾಢ ಬಣ್ಣಗಳು, ಚಿನ್ನದ ಜರಿ, ದೊಡ್ಡ ಬಾರ್ಡರ್‌ಗಳ ಸೀರೆಗಳು ಈಗ ಮತ್ತೆ ಟ್ರೆಂಡ್‌ ಆಗಿವೆ. ಈ ಸೀರೆಗಳನ್ನು ಉಟ್ಟರೆ ಸಹಜವಾಗಿಯೇ ಮಹಿಳೆಯ ಲುಕ್‌ ರಾಯಲ್‌ ಆಗಿ ಕಾಣುತ್ತದೆ.

ಸರಳತೆಯೇ ಶ್ರೀಮಂತಿಕೆ

ಈ ಹೊಸ ಟ್ರೆಂಡ್‌ನ ಮತ್ತೊಂದು ವಿಶೇಷತೆ ಅಂದರೆ ಸರಳತೆ. ಭಾರೀ ಡಿಸೈನರ್‌ ವಸ್ತ್ರಗಳಿಗಿಂತ ಸಂಪ್ರದಾಯಕ್ಕೆ ತಕ್ಕಂತೆ ಸರಳ ಉಡುಪುಗಳೇ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಕಡಿಮೆ ಆಭರಣಗಳು ಸಹ ನಿಮ್ಮ ಲುಕ್‌ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದೇ ಇಂದಿನ ಸಾಂಪ್ರದಾಯಿಕತೆ ಅಥವಾ ರೆಟ್ರೊ ಫ್ಯಾಷನ್‌ನ ಮೂಲ ಮಂತ್ರ.

ಪ್ರಾತಿನಿಧಿಕ ಚಿತ್ರ 

ರೆಟ್ರೊ ಲುಕ್‌ಗೆ ನ್ಯೂ ಏಜ್‌ ಟಚ್‌

ಕಂಚೀಪುರಂ, ಮೈಸೂರು ಸಿಲ್ಕ್‌, ಇಳಕಲ್‌ ಸೀರೆಗಳು ಈಗ ಕೇವಲ ಸಂಪ್ರದಾಯವಲ್ಲ, ಸ್ಟೈಲ್‌ ಸ್ಟೇಟ್ಮೆಂಟ್‌ ಕೂಡ. ಗಾಢ ಬಣ್ಣಗಳು, ದೊಡ್ಡ ಅಂಚುಗಳು, ಜರಿಗಳು ಟ್ರೆಂಡ್‌ ಸೃಷ್ಟಿಸಿವೆ. ಇವುಗಳನ್ನು ಕಾನ್ಟ್ರಾಸ್ಟ್‌ ಬ್ಲೌಸ್‌, ಸ್ಲೀವ್‌ಲೆಸ್‌ ಅಥವಾ ಎಲ್ಬೋ ಲೆಂಗ್ತ್‌ ಡಿಸೈನ್‌ಗಳ ಜೊತೆ ಮ್ಯಾಚ್‌ ಮಾಡುತ್ತಿರುವುದೇ ಹೊಸ ಟ್ರೆಂಡ್‌. ಮಲ್ಲಿಗೆ ಹೂ ಮುಡಿಯುವುದು, ಕುಂಕುಮ, ಟೆಂಪಲ್‌ ಜ್ಯುವೆಲರಿ ಇವೆಲ್ಲವೂ ಈಗ ಇನ್‌ಸ್ಟಾಗ್ರಾಂ ಬಳಕೆದಾರರ ಹಾಟ್‌ ಫೇವರಿಟ್‌. ಅತಿಯಾದ ಮೇಕಪ್‌ ಬದಲು ನ್ಯಾಚುರಲ್‌ ಲುಕ್‌ ರೆಟ್ರೊ ಶೈಲಿಗೆ ಸರಿ ಹೊಂದುತ್ತವೆ.

ಸಂಕ್ರಾಂತಿ = ಸ್ಟೈಲ್‌ + ಸಂಸ್ಕೃತಿ

ಸಂಕ್ರಾಂತಿ ಹಬ್ಬ ಕೇವಲ ಸಾಂಪ್ರದಾಯಿಕ ಆಚರಣೆಯಾಗಿ ಉಳಿದಿಲ್ಲ, ಬದಲಾಗಿ ಫ್ಯಾಷನ್‌ ಫೆಸ್ಟಿವಲ್‌ ಆಗಿ ರೂಪಾಂತರಗೊಳ್ಳುತ್ತಿದೆ. ಹಳೆ ಕಾಲದ ರಾಯಲ್‌ ಲುಕ್‌ಗಳಿಗೆ ಹೊಸ ತಲೆಮಾರಿನ ಟ್ರೆಂಡಿ ‍ಪರಿಕಲ್ಪನೆಗಳು ಸಾಥ್‌ ನೀಡುತ್ತಿವೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಸಂಕ್ರಾಂತಿ ಹಬ್ಬದ ಅರ್ಥವೇ ಬದಲಾಗುತ್ತಿದೆ. ಒಮ್ಮೆ ಸರಳ ಆಚರಣೆಗೆ ಸೀಮಿತವಾಗಿದ್ದ ಈ ಹಬ್ಬ, ಈಗ ಸಂಸ್ಕೃತಿ + ಸ್ಟೈಲ್‌ ಎನ್ನುವ ಹೊಸ ಆಯಾಮ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.