ADVERTISEMENT

Budget 2025 Highlights: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ಮುಖ್ಯಾಂಶಗಳು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 16:08 IST
Last Updated 1 ಫೆಬ್ರುವರಿ 2025, 16:08 IST
   

ನವದೆಹಲಿ: ಮಧ್ಯಮ ವರ್ಗದ ಜನರ ಮೇಲಿನ ಆರ್ಥಿಕ ಹೊರೆ ಕೆಳಗಿಳಿಸುವ ಹಾಗೂ ಆರ್ಥಿಕತೆ ಪ್ರಗತಿಗೆ ವೇಗ ನೀಡುವ ಸವಾಲಿನ ನಡುವೆಯೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2025–26ನೇ ಸಾಲಿನ ಕೇಂದ್ರ ಬಜೆಟ್‌ ಮಂಡಿಸಿದ್ದಾರೆ.

ಬಜೆಟ್‌ನ ಪ್ರಮುಖಾಂಶಗಳು ಇಲ್ಲಿವೆ.

  • ದೇಶವೆಂದರೆ ಕೇವಲ ನೆಲವಷ್ಟೇ ಅಲ್ಲ, ಜನರು. ಹಾಗಾಗಿಯೇ ವಿಕಸಿತ ಭಾರತದತ್ತ ಚಿತ್ತ ಹರಿಸಲಾಗಿದೆ ಎನ್ನುತ್ತಾ ಭಾಷಣ ಆರಂಭಿಸಿದ ನಿರ್ಮಲಾ

    ADVERTISEMENT
  • ಬಡತನ, ಯುವ ಜನತೆ, ರೈತರ ಮತ್ತು ಮಹಿಳೆಯರಿಗೆ ಆದ್ಯತೆ; ಎಲ್ಲರಿಗೂ ಉತ್ತಮ ಶಿಕ್ಷಣ, ಬಡತನ ಹೋಗಲಾಡಿಸುವುದು, ಗುಣಮಟ್ಟದ ಹಾಗೂ ಕೈಗೆಟುಕುವ ಆರೋಗ್ಯ ಸೇವೆಗೆ ಒದಗಿಸಲು ಕ್ರಮ

  • ಕಿಸಾನ್‌ ಕ್ರೆಡಿಟ್ಸ್‌ ಕಾರ್ಡ್ಸ್‌: ಸಾಲ ಮಿತಿ ₹ 5 ಲಕ್ಷಕ್ಕೆ ಏರಿಕೆ

  • ಪಿಎಂ ಧನ್‌–ಧಾನ್ಯ ಕೃಷಿ ಯೋಜನೆ: ರಾಜ್ಯಗಳ ಪಾಲುದಾರಿಕೆಯಲ್ಲಿ 1.7 ಕೋಟಿ ರೈತರಿಗೆ ನೆರವು

  • ಆತ್ಮನಿರ್ಭರ ಭಾರತ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ ₹10 ಕೋಟಿಯಿಂದ ₹20ಕೋಟಿವರೆಗೂ ಕಡಿಮೆ ಬಡ್ಡಿ ಸಾಲ. ಮೈಕ್ರೊ ಕಂಪನಿಗಳಿಗೆ ₹5 ಲಕ್ಷವರೆಗಿನ ಕ್ರೆಡಿಟ್‌ ಕಾರ್ಡ್‌ ವಿತರಣೆ ಹಾಗೂ ಇಂಥ 10 ಲಕ್ಷ ಕಾರ್ಡ್‌ ಮೊದಲ ಹಂತದಲ್ಲಿ ಹಂಚಿಕೆ

  • ಉದ್ಯಮ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಉತ್ತೇಜಿಸಲು ಹೊಸ ಯೋಜನೆ; 5 ಲಕ್ಷ ಉದ್ದಿಮೆದಾರರಿಗೆ ಅನುಕೂಲ

  • ಆಹಾರ ತಂತ್ರಜ್ಞಾನಕ್ಕಾಗಿ ಬಿಹಾರದಲ್ಲಿ ರಾಷ್ಟ್ರೀಯ ಸಂಸ್ಥೆ; ಯುಕವರ ಕೌಶಲ ವೃದ್ಧಿ ಮತ್ತು ರೈತರ ಆದಾಯ ಹೆಚ್ಚಳಕ್ಕೆ ಒತ್ತು

  • 8 ಕೋಟಿ ಮಕ್ಕಳು, ಎದೆ ಹಾಲುಣಿಸುವ 1 ಕೋಟಿ ತಾಯಂದಿರಿಗಾಗಿ ಸಮಕ್ಷಮ್‌ ಅಂಗನವಾಡಿ ಪೋಷಣ್‌ 2.0 ಯೋಜನೆ

  • ಪುಸ್ತಕಗಳಿಗೆ ಡಿಜಿಟಲ್‌ ರೂಪ ನೀಡಲು ಭಾರತೀಯ ಭಾಷಾ ಪುಸ್ತಕ ಯೋಜನೆ

  • ಮೇಕ್‌ ಇನ್‌ ಇಂಡಿಯಾ ಉತ್ತೇಜನದ ಸಲುವಾಗಿ ಕೌಶಲ ತರಬೇತಿಗಾಗಿ ಐದು ರಾಷ್ಟ್ರೀಯ ಕೇಂದ್ರಗಳು

  • ₹ 500 ಕೋಟಿ ವೆಚ್ಚದಲ್ಲಿ Centre of Excellence in AI ಸ್ಥಾಪನೆ

  • ಒಂದು ವರ್ಷದೊಳಗೆ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ 10,000 ಸೀಟುಗಳು

  • ದೇಶದ ಎಲ್ಲ ಜಿಲ್ಲೆಗಳಲ್ಲೂ ಡೇಕೇರ್‌, ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಗಳ ಸ್ಥಾಪನೆಗೆ ಹೆಜ್ಜೆ; 2025–26ರ ಹೊತ್ತಿಗೆ 200 ಆರಂಭ

  • ಇ-ಶ್ರಮ ಪೋರ್ಟಲ್‌ನಲ್ಲಿ ಗಿಗ್ ಕಾರ್ಮಿಕರಿಗೆ ಗುರುತಿನ ಪತ್ರ ಮತ್ತು ನೋಂದಣಿ

  • ಜಲ ಜೀವನ್‌ ಮಿಷನ್ ವಿಸ್ತರಣೆ: ಶೇ 100ರ ಗುರಿ ಸಾಧನೆಗಾಗಿ 2028ರವರೆಗೆ ಯೋಜನೆ

  • ಪುನರ್ ಅಭಿವೃದ್ಧಿ, ನೀರು ಸರಬರಾಜು, ನೈರ್ಮಲ್ಯದ ಉದ್ದೇಶಗಳಿಗಾಗಿ ₹ 1 ಲಕ್ಷ ಕೋಟಿ ನಗರ ಸವಾಲು ನಿಧಿ ಸ್ಥಾಪನೆ

  • ಎಲ್ಲ ಸರ್ಕಾರಿ ಶಾಲೆಗಳಿಗೆ ಬ್ರಾಡ್‌ಬಾಂಡ್‌ ಸೇವೆ

  • ಪರಮಾಣು ಶಕ್ತಿ: 2047ರ ಹೊತ್ತಿಗೆ 10 ಗಿಗಾ ವ್ಯಾಟ್‌ ಪರಮಾಣು ಶಕ್ತಿ ಅಭಿವೃದ್ಧಿ ಸಾಧಿಸಬೇಕಿದೆ. ಹಾಗಾಗಿ, ಅಣ್ವಸ್ತ್ರ ಸಂಬಂಧಿತ ಕಾನೂನುಗಳಿಗೆ ತಿದ್ದುಪಡಿ ತರಲಾಗುವುದು.

  • ಬಿಹಾರಕ್ಕೆ ಗ್ರೀನ್‌–ಫೀಲ್ಡ್‌ ಏರ್‌ಪೋರ್ಟ್

  • ಭಾರತೀಯ ಹಸ್ತಪ್ರತಿ ಇತಿಹಾಸದ ಅಧ್ಯಯನ, ದಾಖಲಾತಿಗಾಗಿ ಜ್ಞಾನ ಭಾರತಂ ಮಿಷನ್‌

  • ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿ; ಶೇ 100ರಷ್ಟು ಏರಿಸಲಾಗುವುದು

  • ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ

  • 2025ರಲ್ಲಿ, ಪರಿಷ್ಕೃತ KYC ನೋಂದಣಿ ವ್ಯವಸ್ಥೆ

  • ಕ್ಯಾನ್ಸರ್‌: ಜೀವ ರಕ್ಷಕ ಕೆಲವು ಔಷಧಗಳ ಮೇಲಿನ ತೆರಿಗೆ ರದ್ದು

  • ರಾಜ್ಯಗಳಿಗೆ 50 ವರ್ಷದ ವರೆಗೆ ಬಡ್ಡಿ ರಹಿತ ಸಾಲ

  • ಮೊಬೈಲ್ ಫೋನ್ ದರ ಏರಿಕೆ; ಕೊಬಾಲ್ಡ್‌ ಉತ್ಪನ್ನ, ಎಲ್‌ಇಡಿ, ಜಿಂಖ್‌, ಲೀಥಿಯಮ್‌–ಐಯಾನ್‌ ಬ್ಯಾಟರಿ ರದ್ದಿ ಹಾಗೂ 12 ನಿರ್ಣಾಯಕ ಖನಿಜಗಳ ಮೇಲಿನ ತೆರಿಗೆ ವಿನಾಯಿತಿ

  • ಹಿರಿಯ ನಾಗರಿಕರಿಗೆ ₹ 1 ಲಕ್ಷದ ವರೆಗೆ ಟಿಡಿಎಸ್‌ ವಿನಾಯಿತಿ

  • ಹೊಸ ತೆರಿಗೆ ನೀತಿ ಅನ್ವಯ; ₹ 12 ಲಕ್ಷದ ವರೆಗೆ ತೆರಿಗೆ ವಿನಾಯಿತಿ

ರಕ್ಷಣಾ ಇಲಾಖೆ: ₹4.91 ಲಕ್ಷ ಕೋಟಿ

ಗ್ರಾಮೀಣ ಅಭಿವೃದ್ಧಿ: ₹2.66 ಲಕ್ಷ ಕೋಟಿ

ಗೃಹ ಇಲಾಖೆ: ₹2.33 ಲಕ್ಷ ಕೋಟಿ

ಕೃಷಿ & ರೈತರ ಕಲ್ಯಾಣ: ₹1.71 ಲಕ್ಷ ಕೋಟಿ

ಶಿಕ್ಷಣ: ₹1.28 ಲಕ್ಷ ಕೋಟಿ

ಆರೋಗ್ಯ: ₹98,311 ಕೋಟಿ

ನಗರಾಭಿವೃದ್ಧಿ: ₹96,777 ಕೋಟಿ

ಮಾಹಿತಿ ತಂತ್ರಜ್ಞಾನ: ₹95,298 ಕೋಟಿ

ಇಂಧನ: ₹81,174 ಕೋಟಿ

ವಾಣಿಜ್ಯ ಮತ್ತು ಕೈಗಾರಿಕೆ: ₹68,553 ಕೋಟಿ

ಸಮಾಜ ಕಲ್ಯಾಣ ಇಲಾಖೆ: ₹60,052 ಕೋಟಿ

ವಿಜ್ಞಾನ ಕ್ಷೇತ್ರ: ₹55,679 ಕೋಟಿ

ಬಜೆಟ್‌ ಮಂಡನೆ ವೀಕ್ಷಿಸುತ್ತಿರುವ ಸಾರ್ವಜನಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.