ADVERTISEMENT

ದೇಶದ ನೈಜ ಸಮಸ್ಯೆಗಳನ್ನು ಗಮನಿಸದ ಕುರುಡು ಬಜೆಟ್ : ರಾಹುಲ್ ಗಾಂಧಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2026, 10:48 IST
Last Updated 1 ಫೆಬ್ರುವರಿ 2026, 10:48 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ನವದೆಹಲಿ: ಕೇಂದ್ರ ಬಜೆಟ್‌ ಕುರಿತಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ‌ಪ್ರತಿಕ್ರಿಯಿಸಿದ್ದು, ದೇಶದ ನಿಜವಾದ ಬಿಕ್ಕಟ್ಟುಗಳತ್ತ ಗಮನ ಹರಿಸದ ಕುರುಡು ಬಜೆಟ್‌ ಇದಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಯುವಜನರಿಗೆ ಉದ್ಯೋಗವಿಲ್ಲ. ಉತ್ಪಾದನೆ ಕುಸಿಯುತ್ತಿದೆ. ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಳ್ಳುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಜಾಗತಿಕ ಸವಾಲುಗಳು ಎದುರಾಗುತ್ತಿವೆ. ಆದರೆ ಈ ಬಜೆಟ್‌ನಲ್ಲಿಇದಾವುದನ್ನೂ ಗಮನಿಸಿದೇ ಎಲ್ಲ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿದೆ ಎಂದು ರಾಹುಲ್‌ ಹೇಳಿದ್ದಾರೆ.

ದೇಶದ ನಿಜವಾದ ಬಿಕ್ಕಟ್ಟುಗಳನ್ನು ಗಮನಿಸದೆ, ಸರಿಯಾದ ಮಾರ್ಗವನ್ನು ಅನುಸರಿಸದೆ ವ್ಯರ್ಥ ಬಜೆಟ್ ಅನ್ನು ಮಂಡಿಸಲಾಗಿದೆ ಎಂದು ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಅನಿಶ್ಚಿತತೆ, ವ್ಯಾಪಾರ ಸಂಘರ್ಷದ ನಡುವೆ ಇಂದು ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಸತತ 9ನೇ ಬಾರಿಗೆ ಬಜೆಟ್‌ ಮಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.