ADVERTISEMENT

RCB ಕಪ್ ಗೆದ್ದಾಗ ಬಂದವರು, ಕರ್ನಾಟಕ ರಣಜಿ ಟ್ರೋಫಿ ಗೆದ್ದಾಗ ಬರುವರೊ? ಕಿರ್ಮಾನಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 4:50 IST
Last Updated 5 ಜೂನ್ 2025, 4:50 IST
<div class="paragraphs"><p>ಸೈಯದ್ ಕಿರ್ಮಾನಿ</p></div>

ಸೈಯದ್ ಕಿರ್ಮಾನಿ

   

ಬೆಂಗಳೂರು: ಚಾಂಪಿಯನ್‌ಗಳಿಗೆ ಇದೊಂದು ‘ಡೆಡ್ಲಿ ವೆಲ್‌ಕಮ್’ ಎಂದು ಮಾಜಿ ಕ್ರಿಕೆಟರ್ ಸೈಯದ್ ಕಿರ್ಮಾನಿ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇಂತಹದ್ದೆಲ್ಲ ಆಗುತ್ತೆ ಎನ್ನುವುದನ್ನು ನೋಡಿದರೆ ನಮ್ಮ ಕಾಲದಲ್ಲಿ ಆಗ ಯಾವುದೇ ಟಿ.ವಿ ಮಾಧ್ಯಮಗಳ ಚೀತ್ಕಾರಗಳಿರಲಿಲ್ಲ, ಸಮೂಹ ಸನ್ನಿಗಳಿರಲಿಲ್ಲ. ಅದಕ್ಕೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಪರೋಕ್ಷವಾಗಿ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

ADVERTISEMENT

ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೆ ಭಾರಿ ದುರ್ಘಟನೆಯನ್ನು ತಡೆಯಬಹುದಿತ್ತು. ಸಮಯ ಹೊಂದಾಣಿಕೆ ಮಾಡಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಿದ್ದರೆ ಅಮಾಯಕರ ಜೀವ ಉಳಿಯುತ್ತಿದ್ದವು ಎಂದು ಹೇಳಿದ್ದಾರೆ.

ಒಂದು ಕಪ್ ಪಡೆಯಲು 18 ವರ್ಷ ಕಾದರು. ಆದರೆ, ಹರ್ಷೋತ್ಸವ ಮಾಡಲು ಇನ್ನೊಂದೆರಡು ದಿನ ಕಾಯಬಹುದಿತ್ತು. ವ್ಯವಸ್ಥಿತ ಕಾರ್ಯಕ್ರಮ ಆಯೋಜಿಸಿ ಆರ್‌ಸಿಬಿ ಹಿರೋಗಳನ್ನು ಸ್ವಾಗತಿಸಬಹುದಿತ್ತು ಎಂದು ಹೇಳಿದ್ದಾರೆ.

ಆರ್‌ಸಿಬಿ ಅಭಿಮಾನಿಗಳ ಅಭಿಮಾನ ಹುಚ್ಚುತನಕ್ಕೆ ತಿರುಗಿರುವುದು ಸ್ಪಷ್ಟವಾಗಿದೆ. ಆರ್‌ಸಿಬಿ ಕಪ್ ಗೆದ್ದಾಗ ಬಂದಿರುವ ಅಭಿಮಾನಿಗಳು ಕರ್ನಾಟಕ ತಂಡ ರಣಜಿ ಟ್ರೋಫಿ ಗೆದ್ದಾಗ ಬರುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಕಾಲದಲ್ಲಿ ಕ್ರಿಕೆಟ್‌ನ ಹುಚ್ಚು ಅಭಿಮಾನಿಗಳನ್ನು ನೋಡಲು ಸಾಧ್ಯವಿರಲಿಲ್ಲ. ಅದೂ ಸಹ ಇಂದಿನ ಐಪಿಎಲ್‌ ಅಭಿಮಾನಿಗಳ ಹುಚ್ಚು ವಿಪರೀತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಣಜಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದ ಸೈಯದ್ ಕಿರ್ಮಾನಿ ಅವರು 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ತಂಡದ ಸದಸ್ಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.