
ಪ್ರಜಾವಾಣಿ ವಾರ್ತೆ
ಹುಲಿ (ಪ್ರಾತಿನಿಧಿಕ ಚಿತ್ರ)
ಮೈಸೂರು: ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಹುಲಿ ಕಾಣಿಸಿಕೊಂಡಿದ್ದು, ನಿಲ್ದಾಣದ ಸಿಬ್ಬಂದಿ ಸೆರೆ ಹಿಡಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಸೋಮವಾರ ಮುಂಜಾನೆ ಹುಲಿ ಸಂಚರಿಸುತ್ತಿದ್ದನ್ನು ಗಮನಿಸಿದ ಗಸ್ತು ಸಿಬ್ಬಂದಿ ವಿಡಿಯೊ ಮಾಡಿದ್ದಾರೆ. ನಂತರ ಪೊದೆಯೊಳಗೆ ಮರೆಯಾಗಿದೆ.
ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ್, ಡಿಸಿಎಫ್ ಕೆ.ಪರಮೇಶ್, ಎಸಿಎಫ್ ರವೀಂದ್ರ, ಆರ್‌ಎಫ್‌ಒ ಸಂತೋಷ್ ಹೂಗಾರ್ ಪರಿಶೀಲನೆ ನಡೆಸಿದ್ದು, ಪತ್ತೆ ಆಗಿಲ್ಲ.
'ಹುಲಿ ಕಾಣಿಸಿಕೊಂಡಿರುವುದು ಖಚಿತವಾಗಿದ್ದು, ಹುಡುಕಾಟ ನಡೆದಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.