ADVERTISEMENT

ಡೀಪ್‌ಫೇಕ್ ಜಾಹೀರಾತು: ಕಾಂಗ್ರೆಸ್ ವಿರುದ್ಧ ಎಫ್‌ಐಆರ್ ದಾಖಲಿಸಿದ ನಟ ಅಮೀರ್ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಏಪ್ರಿಲ್ 2024, 10:40 IST
Last Updated 16 ಏಪ್ರಿಲ್ 2024, 10:40 IST
<div class="paragraphs"><p>ಅಮೀರ್ ಖಾನ್ </p></div>

ಅಮೀರ್ ಖಾನ್

   

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ರಾಜಕೀಯ ಜಾಹೀರಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಬಾಲಿವುಡ್ ನಟ ಅಮೀರ್ ಖಾನ್ ಅವರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಅಮೀರ್ ಖಾನ್ ಮಾತನಾಡಿರುವಂತೆ ಕೃತಕ ಬುದ್ಧಿಮತ್ತೆ ಬಳಸಿ ಡೀಪ್‌ಫೇಕ್ ವಿಡಿಯೊ ಜನರೇಟ್ ಮಾಡಲಾಗಿದೆ.

ADVERTISEMENT

ದೂರದರ್ಶನ ಕಾರ್ಯಕ್ರಮ ‘ಸತ್ಯಮೇವ ಜಯತೇ’ ಸಂಚಿಕೆಯನ್ನು ಒಳಗೊಂಡಂತೆ ವಿವಾದಿತ ಜಾಹೀರಾತಿನಲ್ಲಿ ಅಮೀರ್ ಖಾನ್ ದೃಶ್ಯವನ್ನು ಸೇರಿಸಲಾಗಿದೆ. ಬಿಜೆಪಿಯು ನಾಗರಿಕರ ಬ್ಯಾಂಕ್ ಖಾತೆಗಳಿಗೆ ₹15 ಲಕ್ಷ ಜಮೆ ಮಾಡುವ ಭರವಸೆಯನ್ನು ಅಮೀರ್ ಖಾನ್ ಟೀಕಿಸಿರುವಂತೆ ವಿಡಿಯೊವನ್ನು ತಯಾರಿಸಲಾಗಿದೆ. ಕೂಡಲೇ ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ದೂರನಲ್ಲಿ ಮನವಿ ಮಾಡಲಾಗಿದೆ.

‘ಅಮೀರ್ ಖಾನ್ ಅವರು ತಮ್ಮ 35 ವರ್ಷಗಳ ವೃತ್ತಿಜೀವನದುದ್ದಕ್ಕೂ ಯಾವುದೇ ರಾಜಕೀಯ ಪಕ್ಷದ ಪರ ದ್ವನಿಗೂಡಿಸಿಲ್ಲ. ಜತೆಗೆ, ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಖಾನ್ ಶ್ರಮಿಸಿದ್ದಾರೆ’ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.