ADVERTISEMENT

ಭಾರತದ ಮೊದಲ ಪ್ರಧಾನಿ ‘ನೆಹರೂ’ ಅಲ್ಲ ‘ಸುಭಾಷ್ ಚಂದ್ರ ಬೋಸ್’ ಎಂದ ಕಂಗನಾ ರನೌತ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2024, 12:28 IST
Last Updated 5 ಏಪ್ರಿಲ್ 2024, 12:28 IST
<div class="paragraphs"><p>ಕಂಗನಾ ರನೌತ್‌</p></div>

ಕಂಗನಾ ರನೌತ್‌

   

–ಪಿಟಿಐ ಚಿತ್ರ

ನವದೆಹಲಿ: ಬಾಲಿವುಡ್‌ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್‌ ಅವರು ಭಾರತದ ಮೊದಲ ಪ್ರಧಾನಿ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

ADVERTISEMENT

ಮಾರ್ಚ್ 27ರಂದು ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಕಂಗನಾ ಭಾಗವಹಿಸಿದ್ದರು. ಸುಮಾರು ಒಂದು ವಾರದ ನಂತರ ಆಕೆಯ ಸಂದರ್ಶನದ ಕ್ಲಿಪ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಭಾರತದ ಮೊದಲ ಪ್ರಧಾನಿ ‘ಜವಾಹರಲಾಲ್‌ ನೆಹರೂ’ ಅಲ್ಲ, ‘ಸುಭಾಷ್ ಚಂದ್ರ ಬೋಸ್’ ಎಂದು ಹೇಳಿದ್ದಾರೆ.

‘ನನ್ನ ಪ್ರಕಾರ, ಸುಭಾಷ್ ಚಂದ್ರ ಬೋಸ್ ಅವರು ದೇಶದ ಮೊದಲ ಪ್ರಧಾನಿ ಎಂದ ಕಂಗನಾ ಹೇಳಿದರು. ಕೂಡಲೇ ನಿರೂಪಕಿ, ಬೋಸ್ ಅವರು ಭಾರತದ ಮೊದಲ ಪ್ರಧಾನಿ ಅಲ್ಲ ಎಂದು ನೆನಪಿಸಿದರು. ತಕ್ಷಣ ಎಚ್ಚೆತ್ತ ಕಂಗನಾ, ಬೋಸ್‌ ಅವರು ಪ್ರಧಾನಿ ಆಗಿರಲಿಲ್ಲ ಹೌದು, ಆದರೆ ಏಕೆ? ಅವರು ಎಲ್ಲಿಗೆ ಹೋದರು? ಅವರು ಹೇಗೆ ಕಣ್ಮರೆಯಾದರು’ ಎಂದು ಪ್ರಶ್ನಿಸಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ವಿವಿಧಿ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

‘ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರ ಪ್ರಕಾರ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಮೊದಲ ಪ್ರಧಾನಿಯಂತೆ’ ಎಂದು ರೋಶನ್ ರಾಯ್ ಎಂಬುವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಹಿಂದೆ ‘2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು’ ಎಂದು ಕಂಗನಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.