ADVERTISEMENT

ಹೊಸ ಲುಕ್‌ನಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್: ವೈರಲ್ ಆಯ್ತು ಫೋಟೊ ಶೂಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2022, 12:26 IST
Last Updated 15 ಜುಲೈ 2022, 12:26 IST
ಪ್ರಿಯಾ ಪ್ರಕಾಶ್ ವಾರಿಯರ್ (ಇನ್‌ಸ್ಟಾಗ್ರಾಮ್‌ ಚಿತ್ರ)
ಪ್ರಿಯಾ ಪ್ರಕಾಶ್ ವಾರಿಯರ್ (ಇನ್‌ಸ್ಟಾಗ್ರಾಮ್‌ ಚಿತ್ರ)   

ಮುಂಬೈ: ‘ಕಣ್ಸನ್ನೆ ಹುಡುಗಿ’ ಖ್ಯಾತಿಯ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಪ್ರಿಯಾ ವಾರಿಯರ್, ಪ್ರವಾಸ, ಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಕ್ಲಿಕ್ಕಿಸಿದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.

ಪ್ರಿಯಾ, ಇತ್ತೀಚೆಗೆ ಮುಂಬೈ ಹೋಟೆಲ್‌ವೊಂದರಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.ಕೆಂಪು ಬಣ್ಣದ ಉಡುಪು ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೊಗಳನ್ನುಪ್ರಿಯಾ ತಮ್ಮ ಇನ್‌ಸ್ಟಾಗ್ರಾಮ್‌ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಬಾಲಿವುಡ್ ಪ್ರಾಜೆಕ್ಟ್‌‌ವೊಂದರ ನಿಮಿತ್ತ ಪ್ರಿಯಾ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ ಎಂದು ವರದಿಯಾಗಿದೆ.

ಪ್ರಿಯಾ ವಾರಿಯರ್ ಕಣ್ಣು ಮಿಟುಕಿಸುವ ಮೂಲಕವೇ ರಾತ್ರಿ ಬೆಳಗಾಗುವುದರಲ್ಲಿ ಭಾರತದ ಸೆನ್ಸೆಷನ್ ಹುಡುಗಿ ಎನ್ನಿಸಿಕೊಂಡರು. ‘ಒರು ಅಡಾರ್ ಲವ್’ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ’ ಹಾಡಿನ ದೃಶ್ಯದಲ್ಲಿ ಆಕೆ ಕಣ್ಣು ಮಿಟುಕಿಸಿದ್ದು ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೊತ್ತಿಸಿತ್ತು. ಆ ಕಣ್ಸನ್ನೆಯೇ ದೇಶದಾದ್ಯಂತ ಆಕೆಗೆ ಅಭಿಮಾನಿ ಬಳಗ ಸೃಷ್ಟಿ ಆಗುವಂತೆ ಮಾಡಿತ್ತು.

ಯುಟ್ಯೂಬ್‌ನಲ್ಲಿ ಈಕೆ ಕಣ್ಣು ಮಿಟುಕಿಸಿದ ದೃಶ್ಯಕ್ಕಾಗಿ ಹುಡುಕಾಡಿದ್ದು ದಾಖಲೆಯಾಗಿತ್ತು. ಆ ಮೂಲಕ ಈಕೆ ಸಾಮಾಜಿಕ ಜಾಲತಾಣಗಳಲ್ಲಿ ‘ನ್ಯಾಷನಲ್ ಸೆಲೆಬ್ರೆಟಿ’ ಎನ್ನಿಸಿಕೊಂಡಿದ್ದರು. ಅಲ್ಲದೇ, 2018ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಸೆಲೆಬ್ರೆಟಿ ಎಂಬ ಹಿರಿಮೆ ಹೊಂದಿದ್ದಾರೆ.

ತೆಲುಗಿನ ‘ಚೆಕ್‌’ ಸಿನಿಮಾದಲ್ಲಿ ನಟ ನಿತಿನ್‌, ರಾಕುಲ್‌ ಪ್ರೀತ್‌ ಸಿಂಗ್‌ ಅವರೊಂದಿಗೆ ಪ್ರಿಯಾ ವಾರಿಯರ್ ಕಾಣಿಸಿಕೊಂಡಿದ್ದರು.

‘ವಿಷ್ಣು ಪ್ರಿಯ’ ಚಿತ್ರದ ಮೂಲಕ ಪ್ರಿಯಾ ವಾರಿಯರ್‌ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.