
ಚಿತ್ರ ಕೃಪೆ: Ananya Bhat
‘ಸೋಜುಗಾದ ಸೂಜಿ ಮಲ್ಲಿಗೆ' ಗಾಯಕಿ ಅನನ್ಯಾ ಭಟ್ ಅವರು ಜನಪ್ರಿಯ ಡ್ರಮ್ಮರ್ ವಾದಕ ಮಂಜುನಾಥ್ ಸತ್ಯಶೀಲ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸೋಜುಗಾದ ಸೂಜಿ ಮಲ್ಲಿಗೆ ಹಾಡಿನ ಮೂಲಕ ಗಮನ ಸೆಳೆದಿದ್ದ ಅನನ್ಯಾ ಅವರು ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ.
ರಂಗಗೀತೆಗಳ ಮೂಲಕ ಮೈಸೂರಿನಲ್ಲಿ ಮನೆಮಾತಾಗಿದ್ದ ಇವರು, 2013ರಲ್ಲಿ ಹಾಡಿದ ಲೂಸಿಯಾ ಚಿತ್ರದ 'ನೀ ತೊರೆದ ಘಳಿಗೆಯಲಿ' ಹಾಡು ಹೆಸರು ತಂದುಕೊಟ್ಟಿತು.
'ಒಲವೇ ಜೀವನ ಲೆಕ್ಕಾಚಾರ' ಚಿತ್ರ ಅವರ ಮೊದಲ ಹಾಡು. ಬಳಿಕ 'ಸಿದ್ಧಗಂಗಾ', 'ಭುಜಂಗ' 'ರಾಕೆಟ್', 'ಚತುರ್ಭುಜ', ಟಗರು ಚಿತ್ರದ ‘ಮೆಂಟಲ್ ಹೋ ಜಾವಾ’,ಕಾಂತಾರ ಚಿತ್ರದ ‘ಸಿಂಗಾರ ಸಿರಿಯೆ’ ಹಾಗೂ ಕೆ ಜಿ ಎಫ್ ಚಿತ್ರದ ‘ಮೆಹಬೂಬ’ ಸೇರಿದಂತೆ ಅನೇಕ ಹಾಡುಗಳನ್ನು ಹಾಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.