ADVERTISEMENT

ಜಿಮ್‌ನಲ್ಲಿ ವರ್ಕೌಟ್‌: ಸಮಂತಾ ಫಿಟ್ನೆಸ್‌ಗೆ ಅಭಿಮಾನಿಗಳು ಫಿದಾ, ವಿಡಿಯೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 11:52 IST
Last Updated 13 ಮೇ 2022, 11:52 IST
ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ಸಮಂತಾ (ಇನ್‌ಸ್ಟಾಗ್ರಾಮ್‌ ಚಿತ್ರ)
ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ಸಮಂತಾ (ಇನ್‌ಸ್ಟಾಗ್ರಾಮ್‌ ಚಿತ್ರ)   

ಹೈದರಾಬಾದ್: ಆರೋಗ್ಯ ಮತ್ತುಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿರುವ ಬಹು ಭಾಷಾ ನಟಿ ಸಮಂತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದಾರೆ.

ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತೆಲುಗು ನಟ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ, ದೇಹದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.ಸಮಂತಾ ಅತ್ಯಂತ ಸುಲಭವಾಗಿ ತೂಕ ಎತ್ತುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ADVERTISEMENT

ಇತ್ತೀಚೆಗೆ ತೆರೆಕಂಡ ಸುಕುಮಾರ್ ನಿರ್ದೇಶನದ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ, ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ‘ಹೂ ಅಂತಿಯಾ ಮಾವ.. ಊ ಊ ಅಂತಿಯಾ’ ಹಾಡಿಗೆ ಸಮಂತಾ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ.

ಸಿನಿಮಾ ಗೆಲುವಿನಲ್ಲಿ ಈ ವಿಶೇಷ ಹಾಡು ಪ್ರಮುಖ ಪಾತ್ರ ವಹಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಫಿಲಿಪ್‌ ಜಾನ್‌ ನಿರ್ದೇಶನದ ‘ಅರೆಂಜ್‌ಮೆಂಟ್ಸ್‌ ಆಫ್ ಲವ್’ ಎಂಬ ಹಾಲಿವುಡ್‌ ಚಿತ್ರದಲ್ಲಿ ಸಮಂತಾ ಅಭಿನಯಿಸಲಿದ್ದಾರೆ.

ಸಮಂತಾ ಹಾಗೂ ನಾಗ ಚೈತನ್ಯ ಅವರು ಕಳೆದ ವರ್ಷದ (2021) ಅಕ್ಟೋಬರ್‌ನಲ್ಲಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು.

ಸದ್ಯ ಸಮಂತಾ, ವಿಜಯ್ ದೇವರಕೊಂಡ ಅವರೊಂದಿಗೆ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.