ಬಾಲಿವುಡ್ ನಿರ್ದೇಶಕ, ನಟ ಅನುಪಮ್ ಖೇರ್ ಅವರು ತಮಿಳು ನಟ ಕಮಲ್ ಹಾಸನ್ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ನಟ ಅನುಪಮ್ ಖೇರ್, ‘ದೆಹಲಿ ವಿಮಾನ ನಿಲ್ದಾಣದಲ್ಲಿ ಬಹುಭಾಷಾ ನಟ ಕಮಲ್ ಅವರನ್ನು ಭೇಟಿಯಾಗಿ ಸಂತಸವಾಯಿತು. ಅತ್ಯುತ್ತಮ ನಟರಲ್ಲಿ ಇವರು ಕೂಡ ಒಬ್ಬರು. ಹಲವು ವರ್ಷಗಳಿಂದ ಅವರ ಸಿನಿಮಾಗಳನ್ನು ನೋಡುತ್ತಿದ್ದೇನೆ. ನಾನೂ ಒಬ್ಬ ನಟನಾಗಿ ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಈಗಾಗಲೇ ಅವರು ಉತ್ತಮ ನಟರೆಂದು ಸಾಬೀತು ಪಡಿಸಿದ್ದಾರೆ.
ನಾವಿಬ್ಬರೂ ಒಂದು ಗಂಟೆಗೂ ಹೆಚ್ಚು ಕಾಲ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಸಿನಿಮಾ ಜಗತ್ತು, ಕೆ. ಬಾಲಚಂದರ್ ಅವರ ಜೀವನ ಕಥೆ, ನೆಚ್ಚಿನ ಪುಸ್ತಕಗಳು ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದೆವು. ನಿಮ್ಮ ಭೇಟಿಯಿಂದ ಸಾಕಷ್ಟು ವಿಷಯಗಳು ತಿಳಿದುಕೊಂಡೆ’ ಎಂದು ಬರೆದುಕೊಂಡು ಕಮಲ್ ಹಾಸನ್ ಜತೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.