
ಚಿತ್ರ ಕೃಪೆ: Baahubali Movie
ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದ 'ಬಾಹುಬಲಿ' ಚಿತ್ರ ಇದೀಗ ತ್ರಿಡಿ ಆ್ಯನಿಮೇಷನ್ ಅವತರಣಿಕೆಯಲ್ಲೂ ಬರಲಿದೆ ಎಂದು ನಿರ್ಮಾಪಕ, ನಿರ್ದೇಶಕ ಎಸ್.ಎಸ್.ರಾಜಮೌಳಿ ತಿಳಿಸಿದ್ದಾರೆ.
ರಾಜಮೌಳಿ ಅವರು ನಟ ಪ್ರಭಾಸ್, ರಾಣಾ ದಗ್ಗುಬಾಟಿ ಜತೆ ‘ಬಾಹುಬಲಿ–3’ ಕುರಿತು ಮಾತುಕತೆ ನಡೆಸಿರುವ ಯೂಟ್ಯುಬ್ ವಿಡಿಯೊದಲ್ಲಿ ಇದನ್ನು ಹೇಳಿದ್ದಾರೆ.
‘₹120 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ‘ಬಾಹುಬಲಿ ದಿ ಎಟರ್ನಲ್ ವಾರ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ಶೋಬು ಯಾರ್ಲಗಡ್ ನಿರ್ದೇಶನ ಮಾಡುತ್ತಿದ್ದಾರೆ.
ಬಾಹುಬಲಿ–1 ಹಾಗೂ ಬಾಹುಬಲಿ–2 ಎರಡೂ ಭಾಗಗಳ ಒಟ್ಟುಗೂಡಿಸಿ ‘ಬಾಹುಬಲಿ ದಿ ಎಟರ್ನಲ್ ವಾರ್’ ತ್ರಿಡಿ ಆ್ಯನಿಮೇಷನ್ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎಂದು ಎಸ್‌ಎಸ್‌ಆರ್ ತಿಳಿಸಿದ್ದಾರೆ.
ನಟ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣನ್, ಸತ್ಯರಾಜ್ ಮತ್ತು ತಮನ್ನಾ ಭಾಟಿಯಾ ಅವರು ‘ಬಾಹುಬಲಿ ದಿ ಎಟರ್ನಲ್ ವಾರ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ ಎಂದು ರಾಜಮೌಳಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.