ADVERTISEMENT

ಬಾಲಿವುಡ್‌: ಶಾರುಖ್‌, ಹೃತಿಕ್‌, ಅಕ್ಷಯ್‌ ಚಿತ್ರಗಳಿಗೆ ‘ಬಾಯ್ಕಾಟ್‌‘ ಬಿಸಿ ಯಾಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2022, 9:08 IST
Last Updated 16 ಆಗಸ್ಟ್ 2022, 9:08 IST
ಅಕ್ಷಯ್‌, ಶಾರುಖ್‌, ಅಮೀರ್‌, ಹೃತಿಕ್‌
ಅಕ್ಷಯ್‌, ಶಾರುಖ್‌, ಅಮೀರ್‌, ಹೃತಿಕ್‌   

ಮುಂಬೈ:ಬಾಲಿವುಡ್‌ನಲ್ಲಿ ಬಿಗ್‌ಬಜೆಟ್‌ ಸಿನಿಮಾಗಳಿಗೆ ಬಾಯ್ಕಾಟ್‌ ಸಂಕಷ್ಟ ಎದುರಾಗಿದ್ದು, ಇದರಿಂದ ಅಮೀರ್‌ ಖಾನ್‌ ಹಾಗೂ ಅಕ್ಷಯ್‌ ಕುಮಾರ್‌ ಸಿನಿಮಾಗೆ ಬಿಸಿ ತಾಗಿದೆ.

ಅಮೀರ್‌ ಖಾನ್ ಸಿನಿಮಾಗಳಿಗೆ ಮಾತ್ರ ಕಾಡುತ್ತಿದ್ದ ಬಾಯ್ಕಾಟ್‌ ಸಮಸ್ಯೆ ಇದೀಗ ಬಾಲಿವುಡ್‌ನ ಇತರೆ ಸಿನಿಮಾಗಳಿಗೂ ವ್ಯಾಪಿಸಿರುವುದು ನಿರ್ಮಾಪಕರಿಗೆ ದೊಡ್ಡ ತಲೆ ನೋವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಮೀರ್‌ ಖಾನ್‌ ಅಭಿನಯದ 'ಲಾಲ್ ಸಿಂಗ್ ಚಡ್ಡಾ‘ ಸಿನಿಮಾಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಬಾಯ್ಕಾಟ್‌ ಸಮಸ್ಯೆ ಎದುರಾಗಿತ್ತು. ಆಗಸ್ಟ್‌ 11ರಂದುಸಿನಿಮಾ ಬಿಡುಗಡೆಯಾಗಿ ಸಾಧಾರಣ ಮಟ್ಟದಲ್ಲಿ ಗಳಿಕೆ ದಾಖಲಿಸಿದೆ. ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ ಎಂದು ವಿತರಕರು ಹೇಳುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಾಯ್ಕಾಟ್‌ ಬಿಸಿಯಿಂದಾಗಿ ಈ ಸಿನಿಮಾ ಸೋಲು ಕಂಡಿದೆ ಎಂದು ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಲಾಲ್ ಸಿಂಗ್ ಚಡ್ಡಾ‘ ಸಿನಿಮಾ ನೋಡುವಂತೆ ನಟ ಅಕ್ಷಯ್‌ ಕುಮಾರ್‌ ಸಹ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದರು. ಅವರ ಹೇಳಿಕೆಯಿಂದ ಅಕ್ಷಯ್‌ ಸಿನಿಮಾಗೂ ಬಾಯ್ಕಾಟ್‌ ಬಿಸಿ ತಟ್ಟಿತ್ತು.ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆ ಸಂದರ್ಭದಲ್ಲೇ ಅಕ್ಷಯ್‌ ಅಭಿನಯದ ‘ರಕ್ಷ ಬಂಧನ್‌‘ ಚಿತ್ರ ಬಿಡುಗಡೆಯಾಗಿದೆ.

'ಲಾಲ್ ಸಿಂಗ್ ಚಡ್ಡಾ‘ ಸಿನಿಮಾ ನೋಡಿ ಎಂದು ಹೇಳಿದ್ದಕ್ಕೆ ಹಾಗೂ ಸಿನಿಮಾದಲ್ಲಿ ಕೆಲವು ಆಕ್ಷೇಪ ದೃಶ್ಯಗಳು ಇರುವುದರಿಂದಸಾಮಾಜಿಕ ಮಾಧ್ಯಮಗಳಲ್ಲಿ ಅಕ್ಷಯ್‌ ಸಿನಿಮಾವನ್ನು ಬಾಯ್‌ಕಾಟ್‌ ಮಾಡುವಂತೆ ಅಭಿಯಾನ ಮಾಡಲಾಗಿತ್ತು. ಈ ಸಿನಿಮಾ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ನೆಲ ಕಚ್ಚಿದೆ.

ಇದೀಗ ಶಾರುಖ್‌ ಖಾನ್‌ ಮತ್ತು ಹೃತಿಕ್‌ ರೋಷನ್‌ಅಭಿನಯದ ಸಿನಿಮಾಗಳಿಗೂ ಬಾಯ್ಕಾಟ್‌ ಬಿಸಿ ತಟ್ಟುವ ಸಾಧ್ಯತೆಗಳಿವೆ. ಕೆಲ ದಿನಗಳ ಹಿಂದೆ ಹೃತಿಕ್‌,'ಲಾಲ್ ಸಿಂಗ್ ಚಡ್ಡ' ಸಿನಿಮಾ ನೋಡಿ ಹೊಗಳಿದ್ದರು. ನಂತರ ಜನರಲ್ಲಿ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು.

ಹೃತಿಕ್‌ ಅವರ ಈ ನಡೆಯನ್ನು ವಿರೋಧಿಸಿ ಅವರ ಮುಂದಿನ ‘ವಿಕ್ರಂ-ವೇದ' ಸಿನಿಮಾವನ್ನು ಬಾಯ್‌ಕಾಟ್‌ ಮಾಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಶುರುವಾಗಿದೆ. ಈ ಚಿತ್ರದಲ್ಲಿ ಸೈಫ್‌ ಆಲಿಖಾನ್‌ ನಟಿಸಿರುವುದುಬಾಯ್ಕಾಟ್‌ ಅಭಿಯಾನಕ್ಕೆ ಒಂದು ಕಾರಣ ಎನ್ನಲಾಗಿದೆ.

ಈ ಬೆನ್ನಲೇ ಶಾರುಖ್‌ ಅಭಿನಯದ'ಪಠಾಣ್' ಸಿನಿಮಾ ಬಾಯ್ಕಾಟ್‌ ಮಾಡಿ, ಪ್ರಭಾಸ್‌ ಅಭಿನಯದ 'ಆದಿಪುರುಷ್' ಸಿನಿಮಾ ಬೆಂಬಲಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿವೆ.

ಬಾಲಿವುಡ್‌ನಲ್ಲಿ ಧಾರ್ಮಿಕ ಹಾಗೂ ಸೈದ್ಧಾಂತಿಕ ವಿಚಾರಗಳು ಸಿನಿಮಾ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿರುವುದು ಉದ್ಯಮ ಬೆಳವಣಿಗೆಯ ಒಳ್ಳೆಯ ಲಕ್ಷಣಅಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.