ಕೊಯಮತ್ತೂರು : ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟಿ20 ಟೂರ್ನಿ-2026ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅದೇ ಖುಷಿಯಲ್ಲಿ ನಟ ಕಿಚ್ಚ ಸುದೀಪ್ ಹಾಗೂ ತಂಡದವರು ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

ಸಿಸಿಎಲ್ ಫೈನಲ್ ಪಂದ್ಯವು ತಮಿಳುನಾಡಿನ ಕೊಯಮತ್ತೂರಿನಲ್ಲಿ ಭಾನುವಾರ ನಡೆಯಿತು. ಕಿಚ್ಚ ಸುದೀಪ್ ನೇತೃತ್ವದ ಬುಲ್ಡೋಜರ್ಸ್ ತಂಡವು 12 ವರ್ಷಗಳ ಬಳಿಕ ಟೂರ್ನಿಯಲ್ಲಿ ಗೆದ್ದು ಸಿಸಿಎಲ್ ಕಪ್ ತನ್ನದಾಗಿಸಿಕೊಂಡಿದೆ.
ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಪ್ರಿಯಾ, ಸ್ವಾನಿ ಅವರನ್ನು ಬಿಗಿದಪ್ಪಿ ಕಿಚ್ಚ ಗೆಲುವನ್ನು ಸಂಭ್ರಮಿಸಿದ್ದಾರೆ.
ಸಿಸಿಎಲ್‌ನಲ್ಲಿ ಈ ಬಾರಿ ಕರ್ನಾಟಕ ಬುಲ್ಡೋಜರ್ಸ್ ವತಿಯಿಂದ ಮಂಜುನಾಥ ಗೌಡ, ನಟ ಸಚಿನ್, ಚಂದನ್ ಕುಮಾರ್, ಡಾರ್ಲಿಂಗ್ ಕೃಷ್ಣ ಗಣೇಶ್, ಕರಣ್ ಆರ್ಯನ್, ಕಾರ್ತಿಕ್ ಜಯರಾಮ್, ನಿರುಪ್ ಭಂಡಾರಿ, ಕುರಿ ಪ್ರತಾಪ್, ರಾಜೀವ್ ಹನು, ಸುನೀಲ್ ಕುಮಾರ್, ಪ್ರದೀಪ್, ರಾಹುಲ್, ವಿಶ್ವಾಸ್, ಮಹೇಶ್ ಕಣಕ್ಕೆ ಇಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.