ADVERTISEMENT

ಧೀರೆನ್, ಅಮೃತಾ ಪ್ರೇಮ್‌ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2026, 8:34 IST
Last Updated 16 ಜನವರಿ 2026, 8:34 IST
   

ಪೂರ್ಣಿಮಾ ರಾಜ್‌ಕುಮಾರ್ ಪುತ್ರ ಧೀರೆನ್ ಆರ್. ರಾಜ್‌ಕುಮಾರ್, ನಟ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಪ್ರೇಮ್‌ ನಟನೆಯ ‘ಪಬ್ಬಾರ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಗೀತಾ ಪಿಕ್ಚರ್ಸ್‌ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್ ಬಿಡುಗಡೆ ಮಾಡಲಾಗಿದೆ.

ಟೀಸರ್‌ನಲ್ಲಿ ‘ನದಿ ದಡದ ಮೇಲೆ ಒಂದಿಷ್ಟು ಜನ ಸೇರಿ ಶವಸಂಸ್ಕಾರ ಮಾಡುತ್ತಿದ್ದಾಗ, ಆ ಚಿತೆಯನ್ನು ನೋಡುತ್ತಾ ಬಾಲಕನೊಬ್ಬ ಮೂಕ ವಿಸ್ಮಿತನಾಗಿ ನಿಂತಿರುತ್ತಾನೆ. ಆ ವೇಳೆ ಒಬ್ಬ ಮುಸುಕುಧಾರಿ ಆಗಮಿಸುತ್ತಾನೆ. ಬಾಲಕನ ಹತ್ತಿರ ಬಂದು ಮುಸುಕು ತೆಗೆದು ತಮ್ಮ ಮುಖ ತೋರಿಸುತ್ತಾನೆ. ಆತನೇ ಕಥೆಯ ಮುಖ್ಯ ಪಾತ್ರಧಾರಿ ನಾಯಕ  ಧೀರೆನ್.  ನಂತರದ ದೃಶ್ಯದಲ್ಲಿ ಧೀರೆನ್ ಪೊಲೀಸ್ ಉಡುಪಿನಲ್ಲಿ ಕಾಣಿಸಿಕೊಳ್ಳುವುದನ್ನು ತೋರಿಸಲಾಗಿದೆ.

ADVERTISEMENT

ಪೊಲೀಸ್ ಅಧಿಕಾರಿಯಾಗಿದ್ದ ಕಥಾ ನಾಯಕ ಶವ ಸಂಸ್ಕಾರದ ವೇಳೆ ಮುಸುಕುಧಾರಿಯಾಗಿ  ಬರಲು ಕಾರಣವೇನು, ಮೂಕ ವಿಸ್ಮಿತನಾಗಿ ನಿಂತಿದ್ದ ಬಾಲಕ ಹಿನ್ನೆಲೆ‌ಯೇನು ಎನ್ನುವುದು ಸಿನಿಮಾ ನೋಡಿಯೇ ತಿಳಿಯಬೇಕಿದೆ.

ಗೀತಾ ಪಿಕ್ಚರ್ಸ್‌ನಡಿ  ‘ಪಬ್ಬಾರ್’ ಚಿತ್ರ ನಿರ್ಮಾಣವಾಗಿದೆ. ಸಂದೀಪ್ ಸುಕುಂದ್ ಅವರು ನಿರ್ದೇಶನ ಮಾಡಿದ್ದಾರೆ. ಮಯೂರ್ ಅಂಬೆಕಲ್ಲು ಸಂಗೀತ ಸಂಯೋಜನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.