ವಿಜಯ್ ಸೇತುಪತಿ ನಟನೆಯ 'ಗಾಂಧಿ ಟಾಕ್ಸ್' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಜನವರಿ 30ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು.
ಅಸಮಾನತೆ ವಿರುದ್ಧ ಹೋರಾಡುವ ಯುವಕನ ಕಥೆ ಆಧರಿಸಿದ ಚಿತ್ರವು ಮಾರ್ಚ್ 6ರಿಂದ ಜೀ–5ನಲ್ಲಿ ಮಲಯಾಳ, ತಮಿಳು, ತೆಲುಗಿನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಈ ಚಿತ್ರದಲ್ಲಿ ವಿಜಯ್ ಸೇತುಪತಿ ಅವರು ಮಿಡಲ್ ಕ್ಲಾಸ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಉದ್ಯೋಗ, ಹಸಿವಿನಿಂದ ವಂಚಿತನಾಗಿದ್ದ ಯುವಕನಿಗೆ ಮುಂದೆ ನ್ಯಾಯ ಸಿಗುತ್ತದೋ ಇಲ್ಲವೋ ಎಂಬುದೆ ಚಿತ್ರದ ಕಥೆ.
ಈ ಕುರಿತು ಮಾತನಾಡಿರುವ ವಿಜಯ್ ಸೇತುಪತಿ ಅವರು, ‘ಗಾಂಧಿ ಟಾಕ್ಸ್' ಚಿತ್ರದಲ್ಲಿ ಯಾವ ಡೈಲಾಗ್ ಇಲ್ಲದೇ ಕೇವಲ ಹಿನ್ನೆಲೆ ಸಂಗೀತದ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಿದ್ದೇವೆ. ಹಾಗಾಗಿ ಈ ಚಿತ್ರವು ನನ್ನ ಜೀವನದಲ್ಲಿ ವಿಶೇಷ ಪಾತ್ರವಹಿಸಿದೆ’ ಎಂದು ಹೇಳಿಕೊಂಡಿದ್ದಾರೆ.
ಕಿಶೋರ್ ಪಾಂಡುರಂಗ್ ಬೇಲೇಕರ್ ನಿರ್ದೇಶನ ‘ಗಾಂಧಿ ಟಾಕ್ಸ್’ ಚಿತ್ರದಲ್ಲಿ , ವಿಜಯ್ ಸೇತುಪತಿ, ಆದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥ್ ಜಾಧವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.