ADVERTISEMENT

ಧನ್ವೀರ್ ನಟನೆಯ ಹಯಗ್ರೀವ ಚಿತ್ರದ ಹಾಡು ಜ. 31ಕ್ಕೆ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2026, 10:07 IST
Last Updated 28 ಜನವರಿ 2026, 10:07 IST
   

ಧನ್ವೀರ್ ಗೌಡ ಹಾಗೂ ಸಂಜನಾ ಆನಂದ್ ನಟನೆಯ ‘ಹಯಗ್ರೀವ’ ಚಿತ್ರದ ‘ಮೊದಲನೆಯ ಮಾತು’  ಹಾಡಿನ ಬಿಡುಗೆಡೆ ದಿನಾಂಕ ಚಿತ್ರತಂಡ ಘೋಷಣೆ ಮಾಡಿದೆ.

ಈ ಚಿತ್ರದ ‘ಮೊದಲನೆಯ ಮಾತು’ ಹಾಡು ಜ. 31ರಂದು ಸಂಜೆ 5ಕ್ಕೆ ಚಾಮರಾಜನಗರದ ಬ್ರಹ್ಮರಾಂಬ ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಸಮೃದ್ಧಿ ಮಂಜುನಾಥ್ ಅವರ ಕೆ.ವೆ.ಸಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರವನ್ನು ರಘುಕುಮಾರ್ ಅವರು ನಿರ್ದೇಶಿಸಿದ್ದಾರೆ. ‘ಹಯಗ್ರೀವ’  ಚಿತ್ರದ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿದೆ. ಚಿತ್ರದಲ್ಲಿ  ಧನ್ವೀರ್ ಗೌಡ  ಅವರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

‘ಹಯಗ್ರೀವ’ ಚಿತ್ರದಲ್ಲಿ ನಟ ಧನ್ವೀರ್ 

ADVERTISEMENT

ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್, ಅಶ್ವಿನ್ ಹಾಸನ್, ಗಿಲ್ಲಿ ನಟ ಮುಂತಾದವರು ತಾರಾಗಣದಲ್ಲಿದ್ದಾರೆ. 

ಗಿರೀಶ್ ಆರ್. ಗೌಡ ಅವರ ಛಾಯಾಚಿತ್ರಗ್ರಹಣ, ಜುಡಾ ಸ್ಯಾಂಡಿ ಅವರು ಸಂಗೀತ ನಿರ್ದೇಶಿಸಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ, ಅರ್ಜುನ್ ರಾಜ್ ಅವರ ಸಾಹಸ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.