ADVERTISEMENT

ಗೋವಾದಲ್ಲಿ ಸಬಾ ಜತೆ ಹೃತಿಕ್ ರೋಷನ್ ಪಾರ್ಟಿ: ಮಾಜಿ ಪತ್ನಿ ಸುಸಾನೆ ಖಾನ್ ಹಾಜರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2022, 7:58 IST
Last Updated 6 ಏಪ್ರಿಲ್ 2022, 7:58 IST
ಹೃತಿಕ್​ ರೋಷನ್
ಹೃತಿಕ್​ ರೋಷನ್    

ಮುಂಬೈ: ಬಾಲಿವುಡ್‌ ನಟ ಹೃತಿಕ್​ ರೋಷನ್ ಅವರು ಯುವ ನಟಿ ಸಬಾ ಆಜಾದ್ ಅವರೊಂದಿಗೆ ಗೋವಾದಲ್ಲಿ ಪಾರ್ಟಿ ಮಾಡಿದ್ದಾರೆ. ಇದೇ ವೇಳೆ ಹೃತಿಕ್‌ ಮಾಜಿ ಪತ್ನಿ ಸುಸಾನೆ ಖಾನ್ ಸಹ ಹಾಜರಿದ್ದರು ಎಂದು ವರದಿಯಾಗಿದೆ.

ಹೃತಿಕ್​ ರೋಷನ್ –ಸಬಾ ಆಜಾದ್‌ ಮಂಗಳವಾರ ಮುಂಬೈ ಏರ್‌ಪೋರ್ಟ್‌ನಲ್ಲಿ ಕೈ–ಕೈ ಹಿಡಿದುಕೊಂಡು ಒಟ್ಟಿಗೆ ಹೊರಬರುತ್ತಿರುವ, ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

ಈ ಜೋಡಿ ಗೋವಾದಲ್ಲಿ ಪಾರ್ಟಿ ಮುಗಿಸಿಕೊಂಡು ಮುಂಬೈಗೆ ಹಿಂತಿರುಗಿದ್ದಾರೆ. ಪಾರ್ಟಿಯಲ್ಲಿ ಹೃತಿಕ್ ಅವರ ಮಾಜಿ ಪತ್ನಿ ಸುಸಾನೆ ಖಾನ್ ಹಾಗೂ ಆಕೆಯ ಗೆಳೆಯ ಅರ್ಸ್ಲಾನ್ ಗೋನಿ ಕೂಡ ಇದ್ದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಗೋವಾದಲ್ಲಿ ಸುಸಾನೆ ಖಾನ್ ಅವರ ಹೊಸ ರೆಸ್ಟೋರೆಂಟ್ ‘ವೆಡ್ರೊ’ ಉದ್ಘಾಟನೆ ಅಂಗವಾಗಿ ಈ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಬಾಲಿವುಡ್ ನಿರ್ದೇಶಕ ಅಭಿಷೇಕ್ ಕಪೂರ್, ಆಭರಣ ವಿನ್ಯಾಸಕ ಫರಾ ಖಾನ್ ಅಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೀಗ ಪಾರ್ಟಿ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿವೆ.

ಹೃತಿಕ್​ ರೋಷನ್ ಅವರು ಸಬಾ ಆಜಾದ್ ಜತೆಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಹೃತಿಕ್ –ಸಬಾ ಇತ್ತೀಚಿಗೆ ರೆಸ್ಟೋರೆಂಟ್‌ನಿಂದ ಒಟ್ಟಿಗೆ ಹೊರಬರುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಜತೆಗೆ, ಹೃತಿಕ್ ರೋಶನ್ ಫ್ಯಾಮಿಲಿ ಪಾರ್ಟಿಯಲ್ಲೂ ಸಬಾ ಕಾಣಿಸಿಕೊಂಡಿದ್ದರು.

2000ರಲ್ಲಿ ಹೃತಿಕ್​ ರೋಷನ್​ ಹಾಗೂ ಸುಸಾನೆ ಖಾನ್ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ನಂತರ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆದಿದ್ದರು.

ವಿಚ್ಛೇದನ ಪಡೆದ ಬಳಿಕ ಸುಸಾನೆ ಖಾನ್ ಅವರೂ ಕೂಡ ಹಿಂದಿ ಕಿರುತೆರೆ ನಟ ಅರ್ಸ್ಲಾನ್ ಗೋನಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ಹೃತಿಕ್, ಸಬಾ ಆಜಾದ್ ಅವರೊಂದಿಗೆ ​ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.