ಚಿತ್ರ ಕೃಪೆ: Hombale Films
ರಿಷಬ್ ಶೆಟ್ಟಿ ನಟನೆ ‘ಕಾಂತಾರ ಅಧ್ಯಾಯ1‘ ಟ್ರೇಲರ್ ಅದ್ದೂರಿಯಾಗಿ ಇಂದು ಬಿಡುಗಡೆಯಾಗಿದೆ.
2.57 ನಿಮಿಷದ ಸಿನಿಮಾ ಜಲಕ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಕಲಾವಿದರು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ರೇಲರ್ ನೋಡಿದ ನಟ ರಕ್ಷಿತ್ ಶೆಟ್ಟಿ ಅವರು, ಕಥೆಯ ಶ್ರೀಮಂತಿಕೆ ನಿಜಕ್ಕೂ ಅದ್ಭುತವಾಗಿದೆ ಎಂದಿದ್ದಾರೆ.
ವಿಮರ್ಶಕ ತರಣ್ ಆದರ್ಶ್, ಅನೇಕರು ‘ಕಾಂತಾರ ಅಧ್ಯಾಯ 1‘ ಟ್ರೇಲರ್ ಅನ್ನು ಒಪ್ಪಿಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಿನಿ ಪ್ರಿಯರು ಹಾಗೂ ರಿಷಬ್ ಶೆಟ್ಟಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಬಿಡುಗಡೆ ಮಾಡಿದ ಟ್ರೇಲರ್ ಕೆಲವೇ ಹೊತ್ತಿನಲ್ಲಿ 9 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಕನ್ನಡದಲ್ಲಿ ಕನ್ನಡಿಗರಿಂದ, ಹಿಂದಿಯಲ್ಲಿ ನಟ ಹೃತಿಕ್ ರೋಷನ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ತಮಿಳಿನಲ್ಲಿ ಶಿವಕಾರ್ತಿಕೇಯನ್, ತೆಲುಗಿನಲ್ಲಿ ನಟ ಪ್ರಭಾಸ್ ಅವರು ಟ್ರೈಲರನ್ನು ಬಿಡುಗಡೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.