ಚಿತ್ರದ ಪೋಸ್ಟರ್
ಮುಂಬೈ: ಭಾರತದ ಮೊದಲ ಮಲ್ಟಿವರ್ಸ್ ಸೂಪರ್ ಹೀರೋ ಚಿತ್ರ' ಮಲ್ಟಿವರ್ಸ್ ಮನ್ಮಧನ್'ನಲ್ಲಿ ಮಲಯಾಳಂ ನಟ ನಿವಿನ್ ಪೋಳಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ನಟ ಪೋಳಿ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
‘ಎಂಕಿಲಂ ಚಂದ್ರಿಕೆ‘ ಮತ್ತು ಸರಾಸರಿ ಅಂಬಿಲಿ ಖ್ಯಾತಿಯ ಆದಿತ್ಯನ್ ಚಂದ್ರಶೇಖರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
‘ಭಾರತದ ಮೊದಲ ಮಲ್ಟಿವರ್ಸ್ ಸೂಪರ್ ಹೀರೋ ಚಿತ್ರ ‘ಮಲ್ಟಿವರ್ಸ್ ಮನ್ಮಧನ್‘ನಲ್ಲಿ ಕಾಣಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ಈ ಚಿತ್ರ ನನ್ನ ಹೃದಯಕ್ಕೆ ಹತ್ತಿರವಾಗಿದ್ದು, ರೋಮಾಂಚನಕಾರಿಯಾಗಿದೆ ಎಂದು ಪೋಳಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಚಿತ್ರಕ್ಕೆ ಆನಂದು ಮತ್ತು ನೀತಿರಾಜ್ ಕಥೆ ಬರೆದಿದ್ದು, ಪೋಳಿ ನಿರ್ಮಿಸುತ್ತಿದ್ದಾರೆ.
ಪೋಳಿ ಅವರು ‘ಮಲಯಾಳಿ ಫ್ರಮ್ ಇಂಡಿಯಾ‘ ಚಿತ್ರದಲ್ಲಿ ಕಳೆದ ವರ್ಷ ಕಾಣಿಸಿಕೊಂಡಿದ್ದರು.
ಮಲ್ಟಿವರ್ಸ್ ಚಿತ್ರಗಳಲ್ಲಿ ಕಾಲ್ಪನಿಕ ಪಾತ್ರಧಾರಿಗಳು, ಸನ್ನಿವೇಶ, ಚಿತ್ರಗಳು, ಗ್ರಾಫಿಕ್ಸ್ ಮೊದಲಾದವುಗಳನ್ನು ಒಳಗೊಂಡಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.