ಪ್ರಣಯರಾಜ ಶ್ರೀನಾಥ್ ಅವರ ಭಾವುಕ ಮಾತು, ವಿ.ರವಿಚಂದ್ರನ್ ಸಖತ್ ಡಾನ್ಸ್, ಸಾಯಿಕುಮಾರ್ ಖಡಕ್ ಸಂಭಾಷಣೆ, ಶಿವರಾಜ್‌ಕುಮಾರ್ ಚುರುಕು ಉತ್ತರಗಳಿಗೆ ಸಾಕ್ಷಿಯಾಗಿದ್ದು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025’ ಮೂರನೆಯ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ. ಚಂದನವನದ ಬಹುತೇಕ ತಾರೆಯರೆಲ್ಲ ಕಾರ್ಯಕ್ರಮದಲ್ಲಿದ್ದರು. ಒಂದಷ್ಟು ಜನರಿಗೆ ಪ್ರಶಸ್ತಿ ಪಡೆದ ಖುಷಿ, ಮತ್ತೊಂದಷ್ಟು ಗಣ್ಯರಿಗೆ ಪ್ರಶಸ್ತಿ ನೀಡಿದ ಸಾರ್ಥಕತೆ. ಚಂದನವನದ ತಾರೆಯರ ನೃತ್ಯ, ‘ಕಾಮಿಡಿ ಕಿಲಾಡಿ’ಗಳ ಪ್ರಹಸನ ಎಲ್ಲಕ್ಕೂ ಈ ವೇದಿಕೆ ಸಾಕ್ಷಿಯಾಗಿತ್ತು. ಈ ಕಾರ್ಯಕ್ರಮದ ಸಂಪೂರ್ಣ ಚಿತ್ರಣ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.