
ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ‘ರಣ ವಿಕ್ರಮ‘ ನಿರ್ದೇಶಕ ಪವನ್ ಒಡೆಯರ್ ಅವರು ಅಪ್ಪು ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಜತೆಗಿನ ನೆನಪುಗಳನ್ನು ಮೆಲುಕು ಹಾಕಿರುವ ನಿರ್ದೇಶಕ ಪವನ್ ಒಡೆಯರ್ ಅವರು, ‘ಚಿತ್ರೀಕರಣಕ್ಕೆ ತೊಂದರೆ ಆದಾಗ ಅಪ್ಪು ಅವರಿಗೂ ತುಂಬಾ ಕೋಪ ಬರುತ್ತಿತ್ತು. ಸಿನಿಮಾಕ್ಕಾಗಿ ಅವರು ತುಂಬಾ ಶ್ರಮ ವಹಿಸುತ್ತಿದ್ದರು. ಚಿತ್ರತಂಡ ಹೇಳಿದ ಕಸರತ್ತುಗಳನ್ನು ಅವರು ಪ್ರಯೋಗಿಸುತ್ತಿದ್ದರು.
ಅಪ್ಪು ಅವರು ಎಲ್ಲರ ಜತೆಯಲ್ಲಿ ಊಟ ಮಾಡಲು ಇಚ್ಛಿಸುತ್ತಿದ್ದರು. ಬಡವರು ತಂದು ಕೊಡುತ್ತಿದ್ದ ಊಟವನ್ನು ಕೂಡ ಅವರು ಪ್ರೀತಿಯಿಂದ ಸೇವಿಸುತ್ತಿದ್ದರು' ಎಂದು ಪುನೀತ್ ರಾಜ್‌ಕುಮಾರ್ ಅವರ ಸರಳತೆ ಬಗ್ಗೆ ಕೊಂಡಾಡಿದ್ದಾರೆ.
‘ರಣ ವಿಕ್ರಮ ಗೆದ್ದ ಬಳಿಕ ನನಗೆ ಅಪ್ಪು ಅವರು ಅಡ್ವಾನ್ಸ್ ಚೆಕ್ ಕೊಟ್ಟಿದ್ದರು. ಆ ಚೆಕ್‌ಲ್ಲಿ ನಾನು ದುಬಾರಿ ಕಾರು ಖರೀದಿಸಿದ್ದೆ. ನನಗೆ ಅವರ ನೃತ್ಯ ಇಷ್ಟ. ಆದರೆ ‘ರಣ ವಿಕ್ರಮ‘ ಚಿತ್ರದಲ್ಲಿ ಅವರಿಂದ ನೃತ್ಯ ಮಾಡಿಸಲು ಸಾಧ್ಯವಾಗಲಿಲ್ಲ. ಅದರ ಬದಲಾಗಿ ‘ನಟ ಸಾರ್ವಭೌಮ’ ಚಿತ್ರದಲ್ಲಿ ಅವರ ನೃತ್ಯವನ್ನು ಕಣ್ತುಂಬಿಕೊಂಡೆ’ ಎಂದು ನಿರ್ದೇಶಕ ಪವನ್ ಒಡೆಯರ್ ಅವರು ಪುನೀತ್ ರಾಜ್‌ಕುಮಾರ್ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.