ADVERTISEMENT

ರಶ್ಮಿಕಾ ಉಟ್ಟ ಸೀರೆ, ಧರಿಸಿದ ಆಭರಣದ ವಿಶೇಷತೆ ಏನು? ಯಾಕಿಷ್ಟು ಟ್ರೆಂಡ್‌..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2026, 5:47 IST
Last Updated 27 ಫೆಬ್ರುವರಿ 2026, 5:47 IST
   

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಫೆಬ್ರುವರಿ 26ರಂದು ಉದಯಪುರದ ಐಟಿಸಿ ಮೆಮೆಂಟೋಸ್‌ನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿ‌ಟ್ಟಿದ್ದಾರೆ.

ಈ ತಾರಾ ಜೋಡಿ ಮದುವೆ ಸಂಭ್ರಮದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಜೋಡಿ ಧರಿಸಿದ ಉಡುಪು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಸೆಲೆಬ್ರಿಟಿ ಡಿಸೈನರ್ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದ ಉಡುಪುಗಳನ್ನು ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಧರಿಸಿದ್ದರು. ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯನ್ಸರ್‌ಗಳು ಈ ಜೋಡಿ ಧರಿಸಿದ್ದ ಉಡು‍ಪುಗಳ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದಾರೆ.

ADVERTISEMENT

ರಶ್ಮಿಕಾ ಮಂದಣ್ಣ ಧರಿಸಿದ್ದ ಆಭರಣ, ಸೀರೆ

ರಶ್ಮಿಕಾ ಮಂದಣ್ಣ ಅವರು ಕಿತ್ತಳೆ ಬಣ್ಣದ ಬನಾರಸಿ ರೇಷ್ಮೆ ಸೀರೆ ಧರಿಸಿ ಮಿಂಚಿದ್ದರು. ಈ ಸೀರೆಯ ಮೇಲೆ ಕಸೂತಿಯ ಕೈಚಳವಿದೆ. ಅದ್ಭುತ ವಿನ್ಯಾಸಲ್ಲಿ ಸೀರೆ ಮಾಡಲಾಗಿತ್ತು. ಇದಕ್ಕೆ ತಕ್ಕಂತೆ ಬ್ಲೌಸ್‌ ಡಿಸೈನ್‌ ಮೂಡಿಬಂದಿದೆ. ಡೀಪ್ ನೆಕ್‌ ಲೈನ್ ಜತೆಗೆ ವಿಶಿಷ್ಟ ವಿನ್ಯಾಸದ ತೋಳು ಬಂದಿ, ಡಿಟೈಲ್‌ ವರ್ಕ್‌ ಎಲ್ಲವೂ ಸೀರೆಯ ಅಂದವನ್ನು ಇಮ್ಮಡಿಗೊಳಿಸಿತ್ತು. ಸೀರೆಗೆ ಹಾಕಿದ್ದ ಪಿನ್‌ನಿಂದ ಹಿಡಿದು ಹೇರ್‌ಸ್ಟೈಲ್‌, ಹೂ ಮುಡಿದ ವಿಧಾನ ಎಲ್ಲವೂ ವಿಶಿಷ್ಟವಾಗಿತ್ತು. ರಶ್ಮಿಕಾ ಲುಕ್‌ ಅನ್ನು ಇನ್‌ಫ್ಲುಯನ್ಸರ್‌ಗಳು ದೇವಿ ಪಾರ್ವತಿ ಪರಿಕ್ಪಲನೆಯಲ್ಲಿ ಚಿತ್ರಿಸಲಾಗಿದೆ ಎನ್ನುತ್ತಿದ್ದಾರೆ.

ಆಭರಣಗಳ ಆಯ್ಕೆಯಲ್ಲೂ ವಿಭಿನ್ನತೆ ತೋರಿರುವ ಅವರು, ಟೆಂಪಲ್‌ ಜುವೆಲರಿಗಳನ್ನು ಆಯ್ದುಕೊಂಡಿದ್ದಾರೆ. ಡಿಟೈಲ್‌ ವರ್ಕ್‌ ಇರುವ ಚೋಕರ್, ಮಾವಿನ ಕಾಯಿ ವಿನ್ಯಾಸದ ಲಾಂಗ್‌ ಹಾರ, ಡಾಬು, ಮಾಂಗ್ ಟಿಕಾ, ಹಣೆ ಬೊಟ್ಟು, ಮಿನಿಮಲ್‌ ಮೇಕಪ್ ಎಲ್ಲವೂ ವೈಶಿಷ್ಟ್ಯತೆಯಿಂದ ಕೂಡಿತ್ತು.

ವಿಜಯ್‌ ದೇವರಕೊಂಡ ಧರಿಸಿದ್ದ ಉಡುಪು

ದೇವರಕೊಂಡ ಅವರು ರೇಷ್ಮೆ ಧೋತಿ ಹಾಗೂ ಶಾಲು ಧರಿಸಿದ್ದರು. ಇದಕ್ಕೆ ಕಸೂತಿಯ ಸ್ಪರ್ಶ ನೀಡಲಾಗಿದೆ. ವಿಶಿಷ್ಟ ಕೇಶವಿನ್ಯಾಸ, ಚಿನ್ನದ ಹಾರ, ಕಿವಿಗೆ ಸ್ಟಡ್‌ ಸೊಂಟಕ್ಕೆ ಕಮರ್ಬಂಧ್ ಧರಿಸಿದ ವಿಜಯ್‌ ಖಡಕ್‌ ಆಗಿ ಕಾಣಿಸುತ್ತಿದ್ದರು. ಅಂಗೈ ಹಾಗೂ ಪಾದಕ್ಕೆ ಮೆಹಂದಿ ಹಾಕಿಕೊಂಡಿದ್ದ ವಿಜಯ್‌ ಲುಕ್ ವಿಶಿಷ್ಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.