ADVERTISEMENT

ಕಿರಣ್ ರಾಜ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಒಟಿಟಿಗೆ ಲಗ್ಗೆಯಿಟ್ಟ ರಾನಿ ಸಿನಿಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2026, 6:34 IST
Last Updated 9 ಜನವರಿ 2026, 6:34 IST
ಕಿರಣ್ ರಾಜ್
ಕಿರಣ್ ರಾಜ್   

‘ಬಡ್ಡೀಸ್‌’ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ್ದ ನಟ ಕಿರಣ್‌ ರಾಜ್‌ ಅಭಿನಯದ ‘ರಾನಿ’ ಸಿನಿಮಾ ಇದೀಗ ಒಟಿಟಿಗೆ ಲಗ್ಗೆ ಇಟ್ಟಿದೆ. ‘ಕನ್ನಡತಿ’ ಧಾರಾವಾಹಿ ನಂತರ ಗುರುತೇಜ್ ಶೆಟ್ಟಿ ನಿರ್ದೇಶಿಸಿರುವ ‘ರಾನಿ’ ಸಿನಿಮಾದಲ್ಲಿ ಕಿರಣ್ ರಾಜ್ ನಾಯಕರಾಗಿ ನಟಿಸಿದ್ದರು.

ಈ ಕುರಿತು ಜೀ5 ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ. ‘ಮಾಸ್ ಅಲರ್ಟ್.. ಕಿರಣ್ ರಾಜ್ ಅಭಿನಯದ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ‘ರಾನಿ’ ಜ. 9ಕ್ಕೆ Z5ನಲ್ಲಿ ವೀಕ್ಷಿಸಿ’ ಎಂದು ಬರೆದುಕೊಂಡು ಪೋಸ್ಟರ್‌ ಹಂಚಿಕೊಂಡಿದೆ.

ನಟ ಕಿರಣ್ ರಾಜ್‌ ಅವರು ಈ ಹಿಂದೆ ದುಬೈಗೆ ತೆರಳಿ ಸುಮಾರು ಹದಿಮೂರು ಸಾವಿರ ಅಡಿ ಮೇಲಿಂದ ಸ್ಕೈ ಡ್ರೈವ್ ಮಾಡಿ ತಮ್ಮ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದರು. 2024, ಸೆಪ್ಟೆಂಬರ್-12ರಂದು ರಾನಿ ಸಿನಿಮಾ ರಿಲೀಸ್ ಆಗಿತ್ತು. ಕಿರಣ್‌ ರಾಜ್‌ ಜೊತೆಗೆ ಸಮೀಕ್ಷಾ, ರವಿಶಂಕರ್ ಶರ್ಮಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ADVERTISEMENT

ಕನ್ನಡತಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡ ನಟ, ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕರ್ಣನ ನಟನೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.