ಶಾರುಕ್ ಖಾನ್–ರಾಣಿ ಮುಖರ್ಜಿ
ಇನ್‌ಸ್ಟಾಗ್ರಾಮ್
ಮುಂಬೈ: 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇತ್ತೀಚೆಗೆ ಘೋಷಣೆಯಾಗಿತ್ತು. ಬಾಲಿವುಡ್ ನಟ ಶಾರುಕ್ ಖಾನ್, ವಿಕ್ರಾಂತ್ ಮ್ಯಾಸ್ಸೆ ಅವರಿಗೆ ಜಂಟಿ ಅತ್ಯುತ್ತಮ ನಟ ಹಾಗೂ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು.
ಇದೀಗ ನಟ ಶಾರುಕ್ ಅವರು ರಾಣಿ ಮುಖರ್ಜಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಶಾರುಕ್ ಅವರು ತಮ್ಮ ಪುತ್ರನ ಚೊಚ್ಚಲ ನಿರ್ದೇಶನದ ಹಾಡೊಂದಕ್ಕೆ ಇವರಿಬ್ಬರೂ ಹೆಜ್ಜೆ ಹಾಕುವ ಮೂಲಕ ಪ್ರಶಸ್ತಿ ಪಡೆದಿರುವುದನ್ನು ಸಂಭ್ರಮಿಸಿದ್ದಾರೆ.
ಶಾರುಕ್ ಮತ್ತು ರಾಣಿ ಮುಖರ್ಜಿ ಹೆಜ್ಜೆ ಹಾಕಿರುವ ವಿಡಿಯೊವನ್ನು ಶಾರುಖ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 'ನ್ಯಾಷನಲ್ ಅವಾರ್ಡ್.. ನಮ್ಮಿಬ್ಬರಿಗೂ ಈಡೇರದ ಆಸೆ ಇದೀಗ ಈಡೇರಿದೆ. ರಾಣಿ ಮುಖರ್ಜಿ ನಿಮಗೆ ಅಭಿನಂದೆನಗಳು. ನೀವು ಯಾವಾಗಲೂ ರಾಣಿಯೇ' ಎಂದು ಶಾರುಖ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
2023ರಲ್ಲಿ ತೆರೆಕಂಡ ಆಟ್ಲಿ ನಿರ್ದೇಶನದ ಜವಾನ್ ಚಿತ್ರದ ನಟನೆಗಾಗಿ ಶಾರುಕ್ ಖಾನ್ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಮಿಸೆಸ್ ಚಟರ್ಜಿ vs ನಾರ್ವೆ ಚಿತ್ರದ ಪಾತ್ರಕ್ಕಾಗಿ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.
ಶಾರುಕ್ ಅವರ ಮುಂಬರುವ ಚಿತ್ರ 'ಕಿಂಗ್‘ ಮತ್ತು ರಾಣಿ ಮುಖರ್ಜಿ ಅಭಿನಯದ ಮರ್ದಾನಿ–3 ಎರಡೂ ಚಿತ್ರಗಳು 2026ರಲ್ಲಿ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.