ADVERTISEMENT

ಶಿವಣ್ಣ, ಉಪ್ಪಿ ನಟನೆಯ ‘45’ ತೆರೆಗೆ : ಚಿತ್ರಮಂದಿರದಲ್ಲಿ ದೀಪ ಹಚ್ಚಿ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2025, 7:55 IST
Last Updated 25 ಡಿಸೆಂಬರ್ 2025, 7:55 IST
   

ಕರುನಾಡ ಚಕ್ರವರ್ತಿ ನಟ ಶಿವರಾಜ್‌ಕುಮಾರ್‌, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ ‘45’ ಚಿತ್ರ ಇಂದು ಬಿಡುಗಡೆಯಾಗಿದೆ. ಒಂದೊಂದು ಚಿತ್ರಮಂದಿರದಲ್ಲೂ ಅಭಿಮಾನಿಗಳು ಈ ಚಿತ್ರವನ್ನು ಭಿನ್ನವಾಗಿ ಸಂಭ್ರಮಿಸುತ್ತಿದ್ದಾರೆ.

‘45’ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಪಟಾಕಿ ಸಿಡಿಸಿ, ಚಿತ್ರಮಂದಿರದ ಒಳಗೆ ಹೆಜ್ಜೆಹಾಕಿ, ಕಟೌಟ್‌ಗೆ ಹಾಲಿನ ಅಭಿಷೇಕದ ಜೊತೆಗೆ, ಪರದೆಯ ಮುಂಭಾಗ ಮಣ್ಣಿನ ದೀಪ ಹಚ್ಚಿ ಪೂಜೆ ಸಲ್ಲಿಸಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಈ ಚಿತ್ರದಲ್ಲಿ ಪ್ರಮುಖ ನಟರು ಇರುವುದರಿಂದ ಒಬ್ಬೊಬ್ಬರ ಆಗಮನ ದೃಶ್ಯಕ್ಕೂ ಅಭಿಮಾನಿಗಳು ಪೂಜೆ ಸಲ್ಲಿಸಿ, ನಟರ ಹೆಸರನ್ನು ಘೋಷಣೆ ಕೂಗಿದ್ದಾರೆ. ಈ ಚಿತ್ರದ 'Afro ಟಪಾಂಗ್' ಹಾಡಿಗೆ ಅಭಿಮಾನಿಗಳು ಚಿತ್ರಮಂದಿರದ ಒಳಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

ADVERTISEMENT

‘45‘ ಚಿತ್ರವನ್ನು ಸಂಭ್ರಮಿಸಿರುವ ಅಭಿಮಾನಿಗಳಿಗೆ ಈ ಸಿನಿಮಾದ ನಿರ್ದೇಶಕ ಅರ್ಜುನ್ ಜನ್ಯ ಅವರು ಸಾಮಾಜಿಕ ಮಾಧ್ಯಮದಲ್ಲಿ ಕೃತಜ್ಞತೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.