ADVERTISEMENT

ನಟಿ ಶ್ರೀಲೀಲಾಗೆ ಒಲಿದ ಬಂಪರ್ ಆಫರ್; ಸ್ಟಾರ್‌ ನಟನಿಗೆ ಜೋಡಿಯಾದ ‘ಕಿಸ್‌’ ಬೆಡಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2026, 6:26 IST
Last Updated 4 ಫೆಬ್ರುವರಿ 2026, 6:26 IST
<div class="paragraphs"><p>ನಟಿ ಶ್ರೀಲೀಲಾ</p></div>

ನಟಿ ಶ್ರೀಲೀಲಾ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ‘ಕಿಸ್’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ನಟಿ ಶ್ರೀಲೀಲಾ ಅವರಿಗೆ ಬಂಪರ್‌ ಅವಕಾಶ ಸಿಕ್ಕಿದೆ. ಕಿಸ್‌ ಬೆಡಗಿ ಅಂತಲೇ ಜನಪ್ರಿಯರಾಗಿರುವ ನಟಿ ಶ್ರೀಲೀಲಾ ಇದೀಗ ತಮಿಳಿನ ಖ್ಯಾತ ನಟ ಧನುಷ್ ಜೊತೆಗೆ ನಟಿಸಲು ಸಜ್ಜಾಗಿದ್ದಾರೆ.

ADVERTISEMENT

ನಟಿ ಶ್ರೀಲೀಲಾ, ನಟ ಧನುಷ್

ಇತ್ತೀಚಿಗಷ್ಟೇ ನಟಿ ಶ್ರೀಲೀಲಾ ಸಾಮಾಜಿಕ ಮಾಧ್ಯಮದಲ್ಲಿ ಧನುಷ್ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದರು. ಫೋಟೋಗಳಲ್ಲಿ, ಶ್ರೀಲೀಲಾಗೆ ನಟ ಧನುಷ್ ಅವರು ಹೂಗುಚ್ಛದೊಂದಿಗೆ ಸ್ವಾಗತಿಸಿದ್ದನ್ನು ಕಾಣಬಹುದು. ಇದರ ಜೊತೆಗೆ ನಟ ಧನುಷ್ ಜೊತೆಗೆ ಸಾಯಿ ಪ‍ಲ್ಲವಿ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಫೋಟೊವನ್ನು ‘ವಂಡರ್‌ಬಾರ್‌ ಫಿಲ್ಮ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಇನ್ನು, ನಟ ಧನುಷ್‌ ಅವರ 55ನೇ ಸಿನಿಮಾದಲ್ಲಿ ಶ್ರೀಲೀಲಾ ಹಾಗೂ ಸಾಯಿ ಪಲ್ಲವಿ ನಾಯಕಿಯರಾಗಿ ನಟಿಸಲಿದ್ದಾರೆ. ಈ ಸಿನಿಮಾವನ್ನು ರಾಜ್​​ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಲಿದ್ದಾರೆ. 2024ರಲ್ಲಿ ಬಿಡುಗಡೆಯಾದ ‘ಅಮರನ್’ ಸಿನಿಮಾವನ್ನು ಇವರೇ ನಿರ್ದೇಶನ ಮಾಡಿದ್ದರು.

ಸದ್ಯ ನಟಿ ಶ್ರೀಲೀಲಾ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಪ್ರಸ್ತುತ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಗಬ್ಬರ್ ಸಿಂಗ್’, ಸೈಫ್ ಅಲಿ ಖಾನ್ ಅವರ ಪುತ್ರನ ಜೊತೆಗೆ ಒಂದು ಸಿನಿಮಾ, ರಣವೀರ್ ಸಿಂಗ್ ನಟಿಸಲಿರುವ ಹೊಸ ಸಿನಿಮಾದಲ್ಲೂ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಇದೀಗ ನಟ ಧನುಷ್‌ ಸಿನಿಮಾದಲ್ಲಿ ನಟಿಸುವ ಅವಕಾಶವೂ ಲಭಿಸಿದೆ. ಇತ್ತೀಚೆಗೆ ಶ್ರೀಲೀಲಾ ‘ಜ್ಯೂನಿಯರ್‘ ಸಿನಿಮಾ ಬಳಿಕ ಕನ್ನಡದಲ್ಲಿ ಯಾವುದೇ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.