ADVERTISEMENT

ಸುದೀಪ್ ಸೋದರಳಿಯನ ಚಿತ್ರದ ಅರಗಿಣಿಯೇ.. ಹಾಡಿಗೆ ಸಾನ್ವಿ ಧ್ವನಿ: ನಾಳೆ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 6:00 IST
Last Updated 13 ಜನವರಿ 2026, 6:00 IST
   

ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರದ ಎರಡನೇ ಹಾಡು ಜನವರಿ14ರಂದು ಬೆಳಿಗ್ಗೆ 11ಗಂಟೆಗೆ ಬಿಡುಗಡೆಯಾಗುತ್ತಿದೆ.

‘ಅರಗಿಣಿಯೇ.. ನಿನ್ನ ಹೊತ್ತ ತೇರು‘ ಎಂಬ ಹಾಡು ಬಿಡುಗಡೆಗೆ ಸಜ್ಜಾಗಿದೆ. ಈ ಬಗ್ಗೆ ಪ್ರಿಯಾ ಸುದೀಪ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.

ಈ ಸಿನಿಮಾ ಜನವರಿ 15ರಂದು ತೆರೆಕಾಣುತ್ತಿದೆ.

ಈ ಚಿತ್ರದ 'ಹಸ್ರವ್ವ' ಎಂಬ ಮೊದಲ ಹಾಡು ಹಾಗೂ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. 'ಮ್ಯಾಂಗೋ ಪಚ್ಚ'  ಚಿತ್ರವು ಮೈಸೂರು ಭಾಗದ ಕಥೆಯನ್ನು ಹೊಂದಿದೆ.

ADVERTISEMENT

ಕೆಆರ್‌ಜಿ ಸ್ಟುಡಿಯೋ ಹಾಗೂ ಸುದೀಪ್ ಪತ್ನಿ ಪ್ರಿಯಾ ಅವರ ಒಡೆತನದ ಸುಪ್ರಿಯಾನ್ವಿ ಪ್ರೊಡಕ್ಷನ್‌ನಲ್ಲಿ ಜಂಟಿಯಾಗಿ ನಿರ್ಮಾಣಗೊಂಡಿದೆ.

'ಮ್ಯಾಂಗೋ ಪಚ್ಚ'  ಚಿತ್ರದಲ್ಲಿ  ನಾಯಕಿಯಾಗಿ ಕಾಜಲ್ ಕುಂದರ್,  ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ನಟಿ ಹಂಸ ಸೇರಿ ಅನೇಕರು ನಟಿಸಿದ್ದಾರೆ.

‘ಅರಗಿಣಿಯೇ’  ಹಾಡಿಗೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದರೆ, ಕಪಿಲ್ ಕಪಿಲನ್ ಹಾಗೂ ಸುದೀಪ್ ಪುತ್ರಿ ಸಾನ್ವಿ ಅವರು ಧ್ವನಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.