ADVERTISEMENT

ಸ್ನೇಹಿತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ‘ಬಾಹುಬಲಿ‘ ನಟಿ ತಮನ್ನಾ ಭಾಟಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2025, 5:56 IST
Last Updated 22 ಡಿಸೆಂಬರ್ 2025, 5:56 IST
   

ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರು ಸ್ನೇಹಿತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ವಿಡಿಯೊವನ್ನು ಅವರ ಸ್ನೇಹಿತರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ತಮನ್ನಾಗೆ ಶುಭಕೋರಿದ ನಟಿ ಪ್ರಜ್ಞಾ ಕಪೂರ್, ‘ಒಂದು ವರ್ಷದ ಹಿಂದೆ ಪರಿಚಯವಾಗಿದ್ದರೂ ಹಲವು ವರ್ಷದ ನಂಟು ಎನಿಸುತ್ತಿದೆ. ಅಷ್ಟರ ಮಟ್ಟಿಗೆ ನನ್ನ ಹೃದಯದಲ್ಲಿ ಜಾಗ ಪಡೆದಿರುವೆ. ಅನಿರೀಕ್ಷಿತ ಗೆಳೆತನ ಆದರೂ ಅರ್ಥ ಪೂರ್ಣವಾಗಿರುತ್ತದೆ. ನಿನಗೆ ಕೆಲಸದ ಮೇಲಿರುವ ಶ್ರದ್ಧೆ, ಹೃದಯವಂತಿಕೆ ನನ್ನ ಮೆಚ್ಚುಗೆಗೆ ಕಾರಣ. ಇನ್ನಷ್ಟು ಜೀವನ ಇನ್ನಷ್ಟು ಒಳ್ಳೆಯದಾಗಲಿ ’ಎಂದು ಬರೆದುಕೊಂಡು ಶುಭಕೋರಿದ್ದಾರೆ.

ತೆಲುಗು, ಹಿಂದಿ ಚಿತ್ರರಂಗದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಸುಂದರಿ ತಮನ್ನಾ ಭಾಟಿಯಾ ಅವರು ಇತ್ತಿಚೇಗೆ ‘ಆಜ್ ಕಿ ರಾತ್’ ಹಾಡಿನಲ್ಲಿ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಸೆಳೆದಿದ್ದಾರೆ.

ADVERTISEMENT

ಕೆಜಿಎಫ್ ಚಿತ್ರದ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡಿನಲ್ಲಿ ನಟ ಯಶ್ ಜತೆ ಹೆಜ್ಜೆ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.