ADVERTISEMENT

ಆಸ್ಕ‌ರ್ ಪ್ರಶಸ್ತಿ ರೇಸ್‌ನಲ್ಲಿ ‘ತನ್ವಿ ದಿ ಗ್ರೇಟ್’ ಸಿನಿಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2026, 13:00 IST
Last Updated 9 ಜನವರಿ 2026, 13:00 IST
   

ನವದೆಹಲಿ: ಅನುಪ್ ಖೇರ್ ನಿರ್ದೇಶನದ ‘ತನ್ವಿ ದಿ ಗ್ರೇಟ್’ ಚಿತ್ರವು 2026ನೇ ಸಾಲಿನ ಆಸ್ಕ‌ರ್ ಅಕಾಡೆಮಿ ಪ್ರಶಸ್ತಿಗೆ ಕಾಲಿಟ್ಟಿದೆ.

'ಅತ್ಯುತ್ತಮ ಚಿತ್ರ' ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿ ಈ ಸಿನಿಮಾವಿದೆ.

ಸೆಪ್ಟೆಂಬರ್‌ನಲ್ಲಿ ತೆರೆಕಂಡ ಈ ಸಿನಿಮಾ ಚಿತ್ರಮಂದಿರದಲ್ಲಿ ನೂರು ದಿನ ಪೂರೈಸಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ADVERTISEMENT

ಜಾನ್ವಿ ಕಪೂರ್ ನಟನೆಯ 'ಹೋಮ್‌ಬೌಂಡ್‌', ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ ಅಧ್ಯಾಯ–1’ ಸಿನಿಮಾಗಳು ಈ ಬಾರಿಯ ಆಸ್ಕ‌ರ್ ಅಕಾಡೆಮಿ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿವೆ.  

‘ತನ್ವಿ ದಿ ಗ್ರೇಟ್’ ಚಿತ್ರದಲ್ಲಿ ರೈನಾ ಪಾತ್ರದಲ್ಲಿ ನಟಿ ಶುಭಾಂಗಿ ದತ್ ಅವರು ನಟಿಸಿದ್ದಾರೆ. ಈ ಚಿತ್ರ ಕೆಲವು ತಿಂಗಳ ಹಿಂದೆ ಅಂತರರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿಯನ್ನೂ ಗೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.