
ಬೆಂಗಳೂರು: ಮಲಯಾಳ ಸ್ಟಾರ್ ನಟ ಮುಮುಟ್ಟಿ ಅಭಿನಯದ ಕಾಮಿಡಿ ಥ್ರಿಲ್ಲರ್ ಸಿನಿಮಾ ‘ಡೊಮಿನಿಕ್ ಆ್ಯಂಡ್ ದಿ ಲೇಡಿಸ್ ಪರ್ಸ್’ ಡಿ.19ರಂದು ಜೀ 5 ಒಟಿಟಿಯಲ್ಲಿ ತೆರೆಕಾಣಲಿದೆ.
ಗೌತಮ್ ವಾಸುದೇವ ಮೆನನ್ ನಿರ್ದೇಶನದ ಚೊಚ್ಚಲ ಮೋಲಿವುಡ್ ಸಿನಿಮಾ ಇದಾಗಿದ್ದು, 2025ರ ಜನವರಿಯಲ್ಲಿ ಚಿತ್ರ ತೆರೆಕಂಡಿತ್ತು.
ಸಿನಿಮಾದಲ್ಲಿ ಮುಮುಟ್ಟಿ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ನಂತರ ಖಾಸಗಿ ಪತ್ತೆದಾರನಾಗಿ ಪ್ರಕರಣವೊಂದರ ಪತ್ತೆದಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಡೊಮಿನಿಕ್(ಮುಮುಟ್ಟಿ) ಹಾಗೂ ವಿಘ್ನೇಶ್(ಗೋಕುಲ್ ಸುರೇಶ್) ಸಿನಿಮಾದ ಮುಖ್ಯ ಪಾತ್ರಗಳಾಗಿದ್ದು, ಮಹಿಳೆಯೊಬ್ಬರ ಕಳೆದು ಹೋದ ಪರ್ಸ್ ಹುಡುಕುತ್ತಾ, ಸಾಮಾನ್ಯ ಪ್ರಕರಣವೊಂದರ ತನಿಖೆಯಂತೆ ಆರಂಭವಾಗುವ ಸಿನಿಮಾವು ನಂತರ ಹಲವು ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ.
‘ಡೊಮಿನಿಕ್ ಆ್ಯಂಡ್ ದಿ ಲೇಡಿಸ್ ಪರ್ಸ್ ಸಿನಿಮಾದಲ್ಲಿ ಸಾಮಾನ್ಯ ಮನುಷ್ಯನ ಕಥೆಯನ್ನು ಕಟ್ಟಿಕೊಟ್ಟಿದ್ದೇನೆ. ಕೇವಲ 45 ದಿನಗಳಲ್ಲಿ ಇಡೀ ಚಿತ್ರದ ಚಿತ್ರೀಕರಣ ಮಾಡಲಾಗಿದೆ’ ಎಂದು ನಿರ್ದೇಶಕ ಗೌತಮ್ ವಾಸುದೇವ ಮೆನನ್ ಹೇಳಿದ್ದಾರೆ.
ಡೊಮಿನಿಕ್ ಆ್ಯಂಡ್ ದಿ ಲೇಡಿಸ್ ಪರ್ಸ್ ಸಿನಿಮಾವನ್ನು ಮುಮುಟ್ಟಿ ಕಂಪನಿ ನಿರ್ಮಾಣ ಮಾಡಿದೆ. ಸುಶ್ಮಿತಾ ಭಟ್, ವಿಜಿ ವೆಂಕಟೇಶ್, ಸಿದ್ದಿಕಿ, ವಿನೀತ್ ಮತ್ತು ವಿಜಯ್ ಬಾಬು ಅವರು ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.