
2026ನೇ ಸಾಲಿನ ಪ್ರತಿಷ್ಠಿತ ಆಸ್ಕರ್‌ನ 98ನೇ ಅಕಾಡೆಮಿ ಪ್ರಶಸ್ತಿಯ ಅಂತಿಮ ನಾಮನಿರ್ದೇಶದ ಪಟ್ಟಿ ಇಂದು (ಜ.22) ಸಂಜೆ ಪ್ರಕಟಗೊಳ್ಳಲಿದೆ. ಭಾರತೀಯ ಕೆಲವು ಚಿತ್ರಗಳು ನಾಮನಿರ್ದೇಶನ ಪಡೆಯುವ ನಿರೀಕ್ಷೆ ಇದೆ. ಅದರಲ್ಲಿಯೂ ಕನ್ನಡದ ಸಿನಿಮಾ ‘ಕಾಂತಾರ ಚಾಪ್ಟರ್ 1’ ಸೇರಿದಂತೆ ಭಾರತದ ಇತರೆ ಸಿನಿಮಾಗಳಾದ ‘ಹೋಮ್ಬೌಂಡ್’, ‘ತನ್ವಿ: ದಿ ಗ್ರೇಟ್’ ಮತ್ತು ‘ಮಹಾವತಾರ ನರಸಿಂಹ’ ಸಿನಿಮಾಗಳು ಅಂತಿಮ ಪಟ್ಟಿಗೆ ಆಯ್ಕೆಯಾಗಿವೆ.
ಕ್ಯಾಲಿಫೋರ್ನಿಯಾದಿಂದ ನೇರ ಪ್ರಸಾರವಾಗಲಿರುವ ಈ ಕ್ರಾರ್ಯಕ್ರಮವನ್ನು ಭಾರತೀಯ ಕಾಲಮಾನ ರಾತ್ರಿ 9.45ಕ್ಕೆ ವೀಕ್ಷಣೆ ಮಾಡಬಹುದು. ಈ ಬಾರಿ ಅಕಾಡೆಮಿ ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮವನ್ನು ನೇರಪ್ರಸಾರ ಮಾಡುತ್ತಿದೆ. ಮುಖ್ಯವಾಗಿ ಆಸ್ಕರ್.ಕಾಮ್ ಮತ್ತು ಅಕಾಡೆಮಿಯ ಸಾಮಾಜಿಕ ವೇದಿಕೆಗಳಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ. ಇದರ ಜೊತೆಗೆ ಇತರೆ ವಾಹಿನಿಗಳಾದ ಎಬಿಸಿ ನ್ಯೂಸ್ ಲೈವ್, ಡಿಸ್ನಿ+ ಮತ್ತು ಹುಲು ಆ್ಯಪ್‌ನಲ್ಲಿಯೂ ಕಾರ್ಯಕ್ರಮ ಪ್ರಸಾರವಾಗಲಿದೆ.
ಕಾಂತಾರ ಸಿನಿಮಾ ನಾಮನಿರ್ದೇಶನ ಪಟ್ಟಿಗೆ ಸೇರಲಿದೆಯೇ ಎಂದು ಕಾದು ನೋಡಬೇಕಿದೆ.
ಅಲ್ಲದೇ 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮಾರ್ಚ್ 15ರಂದು ನಡೆಯಲಿದೆ. ಈ ಕಾರ್ಯಕ್ರಮ ಎಬಿಸಿ ಮತ್ತು ಹುಲು ಅಪ್ಲಿಕೇಶನ್‌ನಲ್ಲಿ ನೇರ ಪ್ರಸಾರವಾಗಲಿದೆ. ಕಾರ್ಯಕ್ರಮವನ್ನು ನಿರೂಪಕ ಕಾನನ್ ಒ'ಬ್ರೇನ್ ಅವರು ನಿರೂಪಣೆ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.