ADVERTISEMENT

ಸರಿಗಮಪ: ಜೀ ಕನ್ನಡ ವಾಹಿನಿಯಲ್ಲಿ ಡಿ. 14ರಿಂದ ಮತ್ತೆ ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2024, 13:57 IST
Last Updated 12 ಡಿಸೆಂಬರ್ 2024, 13:57 IST
<div class="paragraphs"><p>ಜೀ ಕನ್ನಡ ವಾಹಿನಿಯ ಸರಿಗಮಪದಲ್ಲಿ&nbsp;ವಿಜಯ್ ಪ್ರಕಾಶ್,&nbsp;ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಅನುಶ್ರೀ</p></div>

ಜೀ ಕನ್ನಡ ವಾಹಿನಿಯ ಸರಿಗಮಪದಲ್ಲಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಅನುಶ್ರೀ

   

ಗಾಯನದಲ್ಲಿ ಆಸ್ತಿಯುಳ್ಳವರಿಗಾಗಿ ಆಯೋಜಿಸಲಾಗುವ ರಿಯಾಲಿಟಿ ಶೋ ಕಾರ್ಯಕ್ರಮವಾದ ಸರಿಗಮನ ಡಿ. 14ರಿಂದ ಜೀ ಕನ್ನಡ ವಾಹಿನಿಯಲ್ಲಿ ಹೊಸ ಆವೃತ್ತಿಯೊಂದಿಗೆ ಮತ್ತೆ ಆರಂಭವಾಗುತ್ತಿದೆ.

ಈ ಋತುವಿನಲ್ಲಿ 6 ರಿಂದ 60 ವರ್ಷ ವಯೋಮಿತಿಯವರು ಭಾಗವಹಿಸಬಹುದಾಗಿದೆ. ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಜೊತೆ ರಾಜೇಶ್ ಕೃಷ್ಣನ್ ಮತ್ತೆ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ನಿರೂಪಕಿ ಅನುಶ್ರೀ ಅವರು ಈ ಸೀಸನ್‌ನ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ.

ADVERTISEMENT

ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜತೆಗೆ, ಅವರ ಸ್ಫೂರ್ತಿದಾಯಕ ಕಥೆಗಳೂ ಪ್ರಸಾರವಾಗಲಿವೆ. ಕಾರ್ಯಕ್ರಮದಲ್ಲಿ ಕರ್ನಾಟಕದ ಮತ್ತು ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.

ಸಂಜಿತ್ ಹೆಗ್ಡೆ, ಪೃಥ್ವಿ ಭಟ್‌, ಜಸ್ಕರಣ್ ಸಿಂಗ್, ಐಶ್ವರ್ಯ ರಂಗರಾಜನ್, ಆಶಾ ಭಟ್‌, ಹನುಮಂತು, ದಿಯಾ ಹೆಗ್ಡೆ, ಶ್ರೀನಿಧಿ ಶಾಸ್ತ್ರಿ, ಚೆನ್ನಪ್ಪ, ಸುನೀಲ್ ಗುಜಗೊಂಡ, ಸುಹಾನಾ, ರಜತ್ ಹೆಗ್ಡೆ, ಹರ್ಷ, ದರ್ಶನ್, ಕಂಬದ ರಂಗಯ್ಯ, ಇಂಪನಾ ಜಯರಾಜ್, ಜ್ಞಾನ ಗುರುರಾಜ್, ಸುಪ್ರೀತ್, ನಿಹಾಲ್, ಅಶ್ವಿನ್ ಶರ್ಮ ಅವರಂತ ಯುವ ಗಾಯಕರನ್ನು ಕ್ಷೇತ್ರಕ್ಕೆ ನೀಡಿದ್ದು ಇದೇ ಸರಿಗಮಪ ವೇದಿಕೆ.

ಡಿ. 14ರಿಂದ ಸಂಜೆ 7.30ಕ್ಕೆ ಈ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.