
ನಟಿ ಸುಷ್ಮಾ ಶೇಖರ್
ಚಿತ್ರ: ಇನ್‌ಸ್ಟಾಗ್ರಾಂ
‘ಲಕುಮಿ’, ‘ಯಾರೇ ನೀ ಮೋಹಿನಿ’, ‘ಗಿಣಿರಾಮ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸುಷ್ಮಾ ಶೇಖರ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ (ಜ.25) ಸುಷ್ಮಾ ಶೇಖರ್ ಅವರು ಬಹುಕಾಲದ ಗೆಳೆಯನ ಜೊತೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
ನಟಿ ಸುಷ್ಮಾ ಶೇಖರ್
'ವೆಂಕಟೇಶ್ವರ ಮಹಿಮೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸುಷ್ಮಾ ಶೇಖರ್ ಅವರು 'ಕುಸುಮಾಂಜಲಿ', ‘ಕನಕ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ನಂತರ ನಟನೆಯಿಂದ ದೂರ ಉಳಿದುಕೊಂಡು ಓದಿನ ಕಡೆಗೆ ಗಮನ ಹರಿಸಿದ್ದರು. ನಟಿ ಸುಷ್ಮಾ ಬಿಬಿಎ ಪದವೀಧರೆಯಾಗಿದ್ದಾರೆ.
ನಟಿ ಸುಷ್ಮಾ ಶೇಖರ್ ಸ್ನೇಹಿತರು
ಇತ್ತೀಚೆಗೆ ನಟಿ ಸುಷ್ಮಾ ಅವರು ನಿಶ್ಚಿತಾರ್ಥ ಸಮಾರಂಭದ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಫೋಟೊಗಳನ್ನು ನೋಡಿದ ಅಭಿಮಾನಿಗಳು ನಟಿಯ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.