
ಸಂಜೆ ಕಾಫಿ ಜತೆ ಏನಾದರೂ ವಿಶೇಷ ಸ್ನ್ಯಾಕ್ಸ್ ಮಾಡುವ ಯೋಜನೆ ಇದ್ದರೆ, ನಿಪ್ಪಟ್ಟನ್ನು ಪ್ರಯತ್ನಿಸಿ. ಈ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ
ನಿಪ್ಪಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು– 1ಕಪ್
ಪುಡಿಮಾಡಿಕೊಂಡ ಶೇಂಗಾ, ಹುರಿಗಡಲೆಯ ಮಿಶ್ರಣ – 1 ಕಪ್
ಕತ್ತರಿಸಿಕೊಂಡ ಕರಿ ಬೇವು– ಅಗತ್ಯಕ್ಕೆ ತಕ್ಕಷ್ಟು
ಜೀರಿಗೆ –ಅರ್ಧ ಚಮಚ
ಬಿಳಿ ಎಳ್ಳು– ಅರ್ಧ ಚಮಚ
ಖಾರದ ಪುಡಿ– 1ರಿಂದ2ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಪುಡಿಮಾಡಿಕೊಂಡ ಶೇಂಗಾ, ಹುರಿಗಡಲೆಯ ಮಿಶ್ರಣ, ಜೀರಿಗೆ, ಬಿಳಿ ಎಳ್ಳು, ಖಾರದ ಪುಡಿ, ಕರಿ ಬೇವು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಒಂದೆರಡು ಚಮಚ ಅಡುಗೆ ಎಣ್ಣೆ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಸ್ವಲ್ವ ಸ್ವಲ್ಪ ನೀರು ಸೇರಿಸಿ ಚಪಾತಿ ಹದಕ್ಕೆ ಮಿಶ್ರಣವನ್ನು ಕಲಸಿಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ.
ನಂತರ ಹೋಳಿಗೆ ಪೇಪರ್ ಅಥವಾ ರೊಟ್ಟಿ ಕವರ್ ಮೇಲೆ ಎಣ್ಣೆ ಹಚ್ಚಿ , ಕಲಸಿಕೊಂಡ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ನಿಪ್ಟಟ್ಟು ಆಕಾರದಲ್ಲಿ ಲಟ್ಟಿಸಿ ಎಣ್ಣೆಗೆ ಬಿಡಿ..
ಎಣ್ಣೆಗೆ ಹಾಕಿದ ನಿಪ್ಟಟ್ಟು ಗೋಲ್ಡನ್ ಬಣ್ಣಕ್ಕೆ ಬರುವ ತನಕ ಎಣ್ಣೆಯಲ್ಲಿ ಕರಿದುಕೊಳ್ಳಿ. ಕಾಫಿ ಜತೆ ಸವಿಯಲು ಸಿದ್ಧ ನಿಪ್ಪಟ್ಟು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.