
ಪ್ರಾತಿನಿಧಿಕ ಚಿತ್ರ
ಸಿಹಿ ತಿನ್ನಬೇಕು ಎನಿಸಿದಾಗ ತಕ್ಷಣ ಮಾಡಬಹುದಾದ ತಿನಿಸುಗಳಲ್ಲಿ ಸಿಹಿ ಪೊಂಗಲ್ ಕೂಡ ಒಂದು. ಈ ಸಿಹಿಯಲ್ಲಿ ಬಳಸುವ ಬೆಲ್ಲ, ಹಾಲು, ತೆಂಗಿನಕಾಯಿ, ಒಣಹಣ್ಣುಗಳು ಆರೋಗ್ಯಕ್ಕೂ ಒಳ್ಳೆಯದು. ಹಬ್ಬಗಳಲ್ಲೂ ಇದನ್ನು ಮಾಡಬಹುದು.
ಸಿಹಿ ಪೊಂಗಲ್ ಮಾಡಲು ಬೇಕಾಗುವ ಸಾಮಗ್ರಿಗಳು
ಹೆಸರು ಬೇಳೆ–ಅರ್ಧ ಕಪ್
ಅಕ್ಕಿ– ಅರ್ಧ ಕಪ್
ಹಾಲು–ಅರ್ಧ ಕಪ್
ಬೆಲ್ಲ, ಸಕ್ಕರೆ– ಅರ್ಧ ಕಪ್
ತೆಂಗಿನ ಕಾಯಿ ತುರಿ– ಕಾಲು ಕಪ್
ತುಪ್ಪ – 2ರಿಂದ3 ಚಮಚ
ಒಣ ಶುಂಠಿ ಪುಡಿ – ಚಿಟಿಕೆಯಷ್ಟು
ಏಲಕ್ಕಿ ಪುಡಿ– ಅರ್ಧ ಚಮಚ
ಒಣ ಹಣ್ಣುಗಳು– ಕಾಲು ಕಪ್
ಮಾಡುವ ವಿಧಾನ: ಹೆಸರು ಬೇಳೆಯನ್ನು ನೀರಿನಲ್ಲಿ ನೆನೆಸಿ ತೊಳೆದು 5ರಿಂದ 10 ನಿಮಿಷ ಹುರಿದುಕೊಳ್ಳಿ. ನಂತರ ಅದನ್ನು ತೊಳೆದ ಅಕ್ಕಿ, ಹಾಲು ಹಾಗೂ 1 ರಿಂದ 2 ಲೋಟ ನೀರು ಸೇರಿಸಿ ಹದಕ್ಕೆ ಬೇಯಿಸಿಕೊಳ್ಳಿ.
ನಂತರ ಒಂದು ಬಾಣಲೆಗೆ ಬೆಲ್ಲ, ಸಕ್ಕರೆಯ ಜೊತೆ 1 ರಿಂದ 2 ಲೋಟ ನೀರು ಸೇರಿಸಿ ಕುದಿಸಿಕೊಳ್ಳಿ.
ಬಳಿಕ ಅದಕ್ಕೆ ಬೇಯಿಸಿಕೊಂಡ ಹೆಸರು ಬೇಳೆ– ಅನ್ನದ ಮಿಶ್ರಣ ಸೇರಿಸಿ. ತೆಂಗಿನಕಾಯಿ ತುರಿ ಸೇರಿಸಿ. ಒಣಹಣ್ಣುಗಳನ್ನು ತುಪ್ಪದಲ್ಲಿ ಹುರಿದು ಸೇರಿಸಿದರೆ ಸಿಹಿ ಪೊಂಗಲ್ ಸಿದ್ಧ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.