ADVERTISEMENT

Recipes | ಬಹುಬೇಗನೆ ಹೀಗೆ ಮಾಡಿ ತರಕಾರಿ ಇಡ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2026, 11:37 IST
Last Updated 2 ಜನವರಿ 2026, 11:37 IST
   

ಇಡ್ಲಿ ಅನೇಕರ ನೆಚ್ಚಿನ ಆಹಾರ ಆಗಿದೆ. ರವಾ ಇಡ್ಲಿ, ತಟ್ಟೆ ಇಡ್ಲಿ ಸೇರಿದಂತೆ ಅನೇಕ ಬಗೆಯ ಇಡ್ಲಿಯನ್ನು ಸೇವಿಸಿರುತ್ತೇವೆ. ಅದೇ ರೀತಿ ಸುಲಭವಾಗಿ ಮಾಡಬಹುದಾ ತರಕಾರಿ ಇಡ್ಲಿಯ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ.

ತರಕಾರಿ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು

ರುಬ್ಬಿಕೊಂಡ ಇಡ್ಲಿ ಹಿಟ್ಟು –ಅಗತ್ಯಕ್ಕೆ ತಕ್ಕಷ್ಟು

ADVERTISEMENT

ಕತ್ತರಿಸಿಕೊಂಡ ತರಕಾರಿ– ಬೀನ್ಸ್ 1ರಿಂದ2 ಕಪ್

ತುರಿದ ಕ್ಯಾರೆಟ್– 1ರಿಂದ2 ಕಪ್

ಕೊತ್ತಂಬರಿ ಸೊಪ್ಪು – 1 ಕಪ್ಪು

ಬಟಾಣಿ ಕಾಳು–1 ಕಪ್

ಕತ್ತರಿಸಿಕೊಂಡ ಹಸಿರು ಮೆಣಸಿನ ಕಾಯಿ– ಅಗತ್ಯಕ್ಕೆ ತಕ್ಕಷ್ಟು

ಉಪ್ಪು – ರುಚಿಗೆ ತಕ್ಕಷ್ಟು

ಕತ್ತರಿಸಿಕೊಂಡ ಈರುಳ್ಳಿ– 1 ಕಪ್

ಅಡುಗೆ ಎಣ್ಣೆ

ಮಾಡುವ ವಿಧಾನ: ಮೊದಲು ಕತ್ತರಿಸಿಕೊಂಡ ಬೀನ್ಸ್, ಕ್ಯಾರೆಟ್, ಬಟಾಣಿಯನ್ನು 5ರಿಂದ10ನಿಮಿಷ ಬೇಯಿಸಿಕೊಳ್ಳಿ.

ನಂತರ ರುಬ್ಬಿಕೊಂಡ ಇಡ್ಲಿ ಹಿಟ್ಟಿಗೆ ಬೇಯಿಸಿಕೊಂಡ ತರಕಾರಿ ಮಿಶ್ರಣ, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೇಟ್, ಈರುಳ್ಳಿ, ಹಸಿರುಮೆಣಸಿನಕಾಯಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.

ನಂತರ ತರಕಾರಿ ಮಿಶ್ರಣದ ಹಿಟ್ಟನ್ನು ಇಡ್ಲಿ ಅಚ್ಚಿನ ಪಾತ್ರೆಗೆ, ಸ್ವಲ್ಪ ಪ್ರಮಾಣದ ಅಡುಗೆ ಎಣ್ಣೆ ಹಚ್ಚಿ ಹಿಟ್ಟು ಹಾಕಿ ಬೇಯಿಸಿಕೊಳ್ಳಿ. ನಂತರ ಸಾಂಬಾರ್ ಅಥವಾ ಚಟ್ನಿ ಜತೆ ಸವಿಯಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.