
ಕಲೆರಹಿತ ಕಾಂತಿಯುತ ತ್ವಚೆ ಎಲ್ಲರಿಗೂ ಇಷ್ಟ. ಆದರೆ ಯುವಕ ಯುವತಿಯರಲ್ಲಿ ಮೊಡವೆ ದೊಡ್ಡ ಸಮಸ್ಯೆಯಾಗಿದೆ. ಮನೆಯಲ್ಲಿ ಸಿಗುವ ವಸ್ತುಗಳಿಂದ ಈ ತೊಂದರೆಗೆ ಪರಿಹಾರ ಕಂಡುಕೊಳ್ಳಬಹುದೆಂದು ಆಯುರ್ವೇದ ತಜ್ಞರಾದ ಡಾ. ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.
ಧೂಳಿಗೆ ಹೋಗಿ ಬಂದು ಮುಖ ತೊಳೆಯದಿದ್ದರೆ
ಕರಿದ ಪದಾರ್ಥಗಳ ಅತಿಯಾದ ಸೇವನೆ
ಮಾನಸಿಕ ಒತ್ತಡ
ತಲೆ ಹೊಟ್ಟು
ಅತಿಯಾದ ಸಕ್ಕರೆ, ಡೈರಿ ಉತ್ಪನ್ನಗಳ ಸೇವನೆ
ಕಡಿಮೆ ನೀರು ಕುಡಿಯುವುದರಿಂದ
ಅಷ್ಟೇ ಅಲ್ಲ ಅನುವಂಶಿಕ ಕಾರಣಗಳಿಂದಲೂ ಮೊಡವೆಗಳು ಆಗುತ್ತವೆ ಎಂದು ಆಯುರ್ವೇದ ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮನೆಯಿಂದ ಹೊರಗಡೆ ಹೋಗಿ ಬಂದಾಗ ಕೈ–ಕಾಲು ಜತೆ ಮುಖ ತೊಳೆಯಬೇಕು.
ಹಣ್ಣು, ಮೊಳಕೆ ಕಾಳು ಸೇವಿಸಬೇಕು
ಎಣ್ಣೆ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು
ದಿನಕ್ಕೆ 3ರಿಂದ 4 ಲೀಟರ್ ನೀರು ಸೇವನೆ ಅತ್ಯಗತ್ಯ
ಕ್ರೀಂಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ
ಶ್ರೀಗಂಧ ಅರೆದು ಮೊಡವೆಗಳಿಗೆ ಹಚ್ಚಬಹದು
ಕಹಿ ಬೇವಿನ ಪುಡಿ ಜತೆ ಅರಿಶಿಣ ಪುಡಿ ಮಿಶ್ರಣ ಮಾಡಿ ಹಚ್ಚುವುದರಿಂದ ಮೊಡವೆಗಳು ಕಡಿಮೆ ಆಗುತ್ತವೆ.
ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟನ್ನು ಉಗುರು ಬೆಚ್ಚಗಿನ ನೀರಿನ ಜತೆ ಮಿಶ್ರಣ ಮಾಡಿ ಮುಖಕ್ಕೆ ಮಸಾಜ್ ಮಾಡಿಕೊಂಡು ತೊಳೆಯಿರಿ. ವಾರದಲ್ಲಿ 2–3 ಬಾರಿ ಹೀಗೆ ಮಾಡುವುದರಿಂದ ಮೊಡವೆಗಳು ಶಮನವಾಗುತ್ತವೆ.
ಪಪ್ಪಾಯಿ ಹಣ್ಣು ಅಥವಾ ಪುದೀನಾ ಸೊಪ್ಪಿನ ಪೇಸ್ಟ್, ನಿಂಬೆ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಮಾಯವಾಗುತ್ತವೆ ಎಂದು ಆಯುರ್ವೇದ ತಜ್ಞರಾದ ಡಾ. ಶರದ್ ಕುಲಕರ್ಣಿ ಅವರು ಸಲಹೆ ನೀಡಿದ್ದಾರೆ.
ಲೇಖಕರು: ಬೆಂಗಳೂರಿನ ಆಯುರ್ವೇದ ವೈದ್ಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.