
ಚಳಿಗಾಲದಲ್ಲಿ (ಹೇಮಂತ ಋತು) ಎಲ್ಲಾ ವಯಸ್ಸಿನವರಲ್ಲೂ ಆರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ಅದರಲ್ಲೂ ಮುಖ್ಯವಾಗಿ ಮಕ್ಕಳು ಹೆಚ್ಚಾಗಿ ಅನಾರೋಗಕ್ಕೆ ಒಳಗಾಗುತ್ತಾರೆ. ಹಾಗಾಗಿ ಆ ಸಮಯದಲ್ಲಿ ಮಕ್ಕಳನ್ನು ರಕ್ಷಿಸಲು ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ಚಳಿಗಾಲದಲ್ಲಿ ಮಕ್ಕಳ ಆರೈಕೆಗೆ ಸಲಹೆಗಳು
ಎದೆ ಮತ್ತು ಕಿವಿಗಳನ್ನು ಮುಚ್ಚುವಂತೆ ಬೆಚ್ಚಗಿನ ಬಟ್ಟೆ ಧರಸಿ
ಬೆಳಗಿನ ಮತ್ತು ರಾತ್ರಿ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕು.
ತೇವ ಬಟ್ಟೆಗಳನ್ನು ತಕ್ಷಣ ಬದಲಾಯಿಸುವುದು
ಅಭ್ಯಂಗ ಮತ್ತು ಬಾಹ್ಯೋಪಚಾರ
ಕರ್ಪೂರ ತೈಲ (Karpoora Taila)
ಎದೆ, ಬೆನ್ನು ಮತ್ತು ಪಾದಗಳಿಗೆ ಅಲ್ಪ ಪ್ರಮಾಣದಲ್ಲಿ ಹಚ್ಚುವುದು
ಕಫ ಶಮನ ಮಾಡಿ ಉಸಿರಾಟ ಸುಗಮಗೊಳಿಸುತ್ತದೆ.
ಲವಂಗ ತೈಲ (Lavanga Taila):
ಎದೆ ಅಥವಾ ಗಂಟಲು ಭಾಗಕ್ಕೆ ಹೊರಗಿನಿಂದ ಹಚ್ಚುವುದು
ಕೆಮ್ಮು ಮತ್ತು ಗಂಟಲು ನೋವಿನಲ್ಲಿ ಉಪಕಾರಿ
(ಗಮನಿಸಿ: ಶಿಶುಗಳಿಗೆ(ತಿಂಗಳ ಮಕ್ಕಳು) ಮತ್ತು ಸಣ್ಣ ಮಕ್ಕಳಿಗೆ ವೈದ್ಯರ ಸಲಹೆಯಿಲ್ಲದೆ ನೇರವಾಗಿ ಬಳಸಬಾರದು)
ಬಿಸಿ ನೀರಿನ ಶಾಖ (Steam Inhalation)
ಬಿಸಿ ನೀರಿಗೆ ತುಳಸಿ, 2 ಹನಿ ಕರ್ಪೂರ ತೈಲ ಅಥವಾ ಅಲ್ಪ ಪ್ರಮಾಣದ ಅಜ್ವೈನ್ ಹಾಕಿ
ದಿನಕ್ಕೆ ಒಮ್ಮೆ, 5–10 ನಿಮಿಷ ಶಾಖ ಕೊಡಿಸಿ. ಹೀಗೆ ಮಾಡುವುದರಿಂದ ಸೀನುವಿಕೆ ಹಾಗೂ ಕಫ ಕಡಿಮೆ ಮಾಡುತ್ತದೆ.
ಗಮನಿಸಿ: ( 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ, ಹಿರಿಯರ ಮೇಲ್ವಿಚಾರಣೆಯಲ್ಲಿ )
ಅಮೃತಬಳ್ಳಿ ಕಷಾಯದ ಪ್ರಯೋಜನಗಳು:
ಅಮೃತಬಳ್ಳಿ ಕಷಾಯ – ರೋಗನಿರೋಧಕ ಶಕ್ತಿಗೆ ಆಯುರ್ವೇದದ ವರ
ಅಮೃತಬಳ್ಳಿ (ಗುಡೂಚಿ) ಆಯುರ್ವೇದದಲ್ಲಿ ಪ್ರಸಿದ್ಧ ಔಷಧಿ.
ರೋಗನಿರೋಧಕ ಶಕ್ತಿ ವೃದ್ಧಿ
ಪದೇಪದೇ ಬರುವ ಜ್ವರ, ನೆಗಡಿ, ಕೆಮ್ಮಿನಲ್ಲಿ ಉಪಕಾರಿ
ದೇಹದ ದೋಷ (ವಾತ, ಪಿತ್ತ, ಕಫ) ನಿವಾರಣೆಗೆ ಸಹಕಾರಿ ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.
ಲೇಖಕರು: ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು,
ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ, ಹೆಗ್ಗೇರಿ ಬಡಾವಣೆ ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.