
ಚಿತ್ರ: ಗೆಟ್ಟಿ
ಸಾಮಾನ್ಯವಾಗಿ ಬೀಳುವ ಕನಸುಗಳಲ್ಲಿ ಕೆಲವು ಅಸ್ಪಸ್ಟವಾಗಿರುತ್ತವೆ. ಕೆಲವು ಅರ್ಥವಾದರೆ, ಕೆಲವು ಅರ್ಥವಾಗಿವುದಿಲ್ಲ. ಕನಸುಗಳು ಸಂಕೇತವನ್ನು ತೋರಿಸುತ್ತವೆ ಎಂದು ಮನೋವಿಜ್ಞಾನ ಹೇಳುತ್ತದೆ.
ಸಂಕೇತಾತ್ಮಕ ಕನಸುಗಳು ನಮ್ಮ ಅಜಾಗೃತ ಮನಸ್ಸಿನ ಭಾವನೆ, ಬಯಕೆ ಹಾಗೂ ಭಯಗಳ ಚಿತ್ರಪಟ ಎನ್ನಬಹುದು. ಕನಸು ಕಾಣುವುದು ಮನಸ್ಸಿನ ಅಭಿವ್ಯಕ್ತಿಯಾಗಿದ್ದು, ಕನಸಿನ ಪ್ರತಿ ಚಿತ್ರ, ವಸ್ತು ಹಾಗೂ ಘಟನೆ ಯಾವುದೋ ಅರ್ಥವನ್ನು ಹೊಂದಿರುತ್ತದೆ.
ಸಂಕೇತಾತ್ಮಕ ಕನಸು ಎಂದರೇನು?
ಸಂಕೇತಾತ್ಮಕ ಕನಸು ಎಂದರೆ, ನಿದ್ರೆಯ ವೇಳೆ ಬರುವ ಚಿತ್ರಗಳು ಅಥವಾ ಘಟನೆಗಳು ನೇರ ಅರ್ಥ ನೀಡದೆ, ಒಳನೋಟ ಅಥವಾ ಅಜಾಗೃತ ಅರ್ಥ ನೀಡುತ್ತವೆ. ಇವುಗಳನ್ನು ಮನಸ್ಸಿನ ‘ಗುಪ್ತ ಭಾಷೆ’ ಎಂತಲೂ ಕರೆಯಲಾಗುತ್ತದೆ.
ಮನೋವಿಜ್ಞಾನದಲ್ಲಿ ಕನಸಿನ ಸಂಕೇತಗಳು ನೀಡುವ ಅರ್ಥಗಳು ಇಲ್ಲಿವೆ.
ನೀರು: ಶಾಂತವಾಗಿರುವ ನೀರು ಶಾಂತ ಮನಸ್ಸನ್ನು ಹಾಗೂ ಅಲೆಗಳ ನೀರು ಅಶಾಂತ ಮನಸ್ಸನ್ನು ಸೂಚಿಸುತ್ತದೆ.
ಹಾರುವುದು: ಸ್ವಾತಂತ್ರ್ಯದ ಬಯಕೆ ಅಥವಾ ಹಿಂಸೆಯಿಂದ ದೂರವಾಗುವ ಬಯಕೆಯನ್ನು ವ್ಯಕ್ತ ಪಡಿಸುತ್ತದೆ.
ಹಾವು: ಫ್ರಾಯ್ಡ್ ಎಂಬ ಮನೋವಿಜ್ಞಾನಿಯ ಪ್ರಕಾರ ಈ ಸಂಕೇತವು ಭಯ, ಅಪಾಯ ಅಥವಾ ಹೆಚ್ಚಿದ ಕಾಮಾಸಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಮಳೆ: ಪ್ರೀತಿ ಹಾಗೂ ಶಾಂತಿಯನ್ನು ಪ್ರತಿ ಬಿಂಬಿಸುತ್ತದೆ.
ಅಂಧಕಾರ: ಆತಂಕ, ಗೊಂದಲ, ಅಜ್ಞಾನ ಅಥವಾ ಆಳದ ಭಯವನ್ನು ಸೂಚಿಸುತ್ತದೆ.
ದಾರಿ ಅಥವಾ ಸೇತುವೆ: ಜೀವನದಲ್ಲಿ ಅಗತ್ಯ ಅಥವಾ ನಿರ್ಣಯ ತೆಗೆದುಕೊಳ್ಳುವ ಸಮಯ.
ಪರ್ವತ: ಗುರಿ, ಪ್ರಯತ್ನಗಳಿಗೆ ಅಡೆತಡೆಗಳ ಸಂಕೇತ.
ಫ್ರಾಯ್ಡ್ ಅವರ ವಿವರಣೆ:
ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಅವರ ಪ್ರಕಾರ, ಕನಸುಗಳು ‘ಅಜಾಗೃತ ಮನಸ್ಸಿನ ದಾರಿಯ ಕಿಟಕಿ’. ಅವರು ಎರಡು ಅಂಶಗಳನ್ನು ವಿವರಿಸಿದ್ದಾರೆ. ಅವುಗಳೆಂದರೆ,
ಪ್ರತ್ಯಕ್ಷ ವಿಷಯ (Manifest content): ಕನಸಿನಲ್ಲಿ ನಾವು ನೋಡಿದ ಚಿತ್ರಗಳು ಅಥವಾ ಕಥೆ.
ಅಂತರಂಗ ವಿಷಯ (Latent content): ನಮ್ಮ ಮನಸ್ಸಿನಲ್ಲಿ ಅಡಗಿರುವ ನಿಜವಾದ ಬಯಕೆ.
ಮನೋವಿಜ್ಞಾನಿ ಫ್ರಾಯ್ಡ್ ಅವರು ಹೇಳಿರುವಂತೆ ಕನಸುಗಳು ನಮ್ಮ ಮನಸ್ಸಿನಲ್ಲಿ ‘ಮರೆಮಾಚಿದ ಬಯಕೆಗಳನ್ನು’ ಸುರಕ್ಷಿತವಾಗಿ ವ್ಯಕ್ತಪಡಿಸುವ ಮಾರ್ಗ.
ಮನೋವೈಜ್ಞಾನಿಕ ಅರ್ಥ ಮತ್ತು ವಿಶ್ಲೇಷಣೆ:
ಸಂಕೇತಾತ್ಮಕ ಕನಸುಗಳು ಮನಸ್ಸಿನ ಒಳಲೋಕದ ಕಥನಗಳಾಗಿವೆ. ಅವು ನಮ್ಮೊಳಗಿನ ಭಯ, ಪ್ರೀತಿ, ಬಯಕೆ, ಅಪೂರ್ಣತೆಗಳನ್ನು ಪ್ರತಿಬಿಂಬಿಸುತ್ತವೆ. ಅವುಗಳನ್ನು ಅರಿಯುವ ಮೂಲಕ ನಾವು ನಮ್ಮನ್ನು ಚೆನ್ನಾಗಿ ಅರಿಯಬಹುದು. ಕನಸಿನ ವಿಶ್ಲೇಷಣೆ ಕೆಲವೊಮ್ಮೆ ಭಾವನಾತ್ಮಕ ನಿರಾಳತೆ (emotional relief) ನೀಡುತ್ತದೆ. ಕಾರಣ ಮನಸ್ಸು ತನ್ನ ಅಜಾಗೃತ ಅಂಶಗಳನ್ನು ಹೊರಹಾಕುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.