ADVERTISEMENT

Health Tips: ಬಾಳೆಹಣ್ಣು ಮಾತ್ರವಲ್ಲ, ಬಾಳೆ ಎಲೆ ಊಟದಲ್ಲೂ ಇದೆ ಆರೋಗ್ಯ ಗುಟ್ಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2026, 6:36 IST
Last Updated 24 ಫೆಬ್ರುವರಿ 2026, 6:36 IST
   

ಬಾಳೆಹಣ್ಣು, ಬಾಳೆಎಲೆಯ ಊಟ ಅಂದರೆ ಪ್ರತಿಯೊಬ್ಬರಿಗೂ ಇಷ್ಟ. ಮದುವೆ ಸೇರಿದಂತೆ ಬಹುತೇಕ ಶುಭಕಾರ್ಯಗಳಲ್ಲಿ ಬಾಳೆ ಎಲೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಬಾಳೆ ಎಲೆಯ ಊಟ ರುಚಿ ಮಾತ್ರವಲ್ಲ, ವೈಜ್ಞಾನಿಕ ಕಾರಣವನ್ನು ಒಳಗೊಂಡಿದೆ. ಬಾಳೆಹಣ್ಣು ಸೇವನೆ ಹಾಗೂ ಬಾಳೆ ಎಲೆಯ ಊಟದಿಂದ ದೇಹಕ್ಕೆ ಸಿಗುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ. 

ಬಾಳೆಯಲ್ಲಿ ‘ಟ್ರಿಸ್ಟೋಫಾನ್‌’ ಎಂಬ ಪ್ರೋಟಿನ್ ಇದ್ದು, ಈ ಪ್ರೋಟೀನ್‌ ಅನ್ನು ಶರೀರವು ಸೆರಟೋನಿನ್‌ ಆಗಿ ಬದಲಾಯಿಸಿಕೊಳ್ಳುತ್ತದೆ. ಈ ಸೆರಟೋನಿನ್‌ ಶರೀರವನ್ನು ರಿಲ್ಯಾಕ್ಸ್ ಮಾಡಿ ದಣಿವು ನಿವಾರಣೆಗೆ ಸಹಕಾರಿಯಾಗಲಿದೆ.

ಬಾಳೆಹಣ್ಣಿನ ಉಪಯೋಗ

ADVERTISEMENT

ದೇಹದ ಶಕ್ತಿ ಹೆಚ್ಚಳಕ್ಕೆ ಸಹಕಾರಿ

ಬಾಳೆಹಣ್ಣಿನಲ್ಲಿ ಸುಕ್ರೋಸ್‌ ಪ್ರಕ್ಟೋಸ್‌ ಮತ್ತು ಗ್ಲೂಕೋಸ್‌ ಅಂಶಗಳು ಹೇರಳವಾಗಿದೆ. ಇದರ ಸೇವನೆಯಿಂದ ಶಕ್ತಿ ದೇಹದ ಶಕ್ತಿ ಹೆಚ್ಚಿಸಲು ಸಹಕರಿಸಲಿದೆ.

ಹೊಟ್ಟೆ ಉರಿ ನಿಯಂತ್ರಣ 

ಬಾಳೆಹಣ್ಣು ಮೆಗ್ನೀಷಿಯಂ ಅಂಶಗಳನ್ನು ಒಳಗೊಂಡಿದೆ. ನಿಯಮಿತವಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಆಸಿಡಿಟಿಯಿಂದ ಆಗುವ ಹೊಟ್ಟೆ ಉರಿ ನಿಯಂತ್ರಿಸಬಹುದು. 

ರಕ್ತ ವೃದ್ಧಿಗೆ ಸಹಕಾರಿ

ಅನೇಕ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿರುತ್ತಾರೆ. ಅಂತಹವರು ದಿನಕ್ಕೊಂದು ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ರಕ್ತ ವೃದ್ಧಿಗೆ ಉಪಯುಕ್ತವಾಗಲಿದೆ.

ಜೀರ್ಣಕ್ರಿಯೆಗೆ ಸಹಕಾರಿ

ಬಾಳೆಹಣ್ಣು ಪೆಕ್ಟಿನ್‌ ಎಂಬ ಅಂಶವನ್ನು ಒಳಗೊಂಡಿದೆ. ನಿಯಮಿತವಾಗಿ ದಿನಕ್ಕೊಂದು ಬಾಳೆಹಣ್ಣು ಸೇವನೆ ಮಾಡುವುದರಿಂದ  ಮಲಬದ್ಧತೆಯ ನಿವಾರಣೆಗೆ ಸಹಕರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.