ರಿಂಗ್‌ವರ್ಮ್ ಅಥವಾ ಹುಳುಕಡ್ಡಿ. ಚರ್ಮದ ಮೇಲೆ ಆಗುವ ಫಂಗಲ್ ಸೋಂಕು ಇದಾಗಿದೆ. ಚರ್ಮದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಿದಂತೆ ಸೋಂಕುಗಳ ಬೆಳವಣಿಗೆಗೆ ಕಾರಣವಾಗುತ್ತದೆ. ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.
ಇದರ ಲಕ್ಷಣಗಳು
ಹೆಚ್ಚಾಗಿ ತಲೆಯಲ್ಲಿ ಹಾಗೂ ತೊಡೆಸಂಧಿಯಲ್ಲಿ ಹುಳುಕಡ್ಡಿ ಆಗುತ್ತವೆ.
ಚರ್ಮದ ಮೇಲೆ ಕೆಂಪು ಬಣ್ಣದಲ್ಲಿ ಆಗುವ ದದ್ದುಗಳು
ವಿಪರೀತ ತುರಿಕೆ ಹಾಗೂ ಉರಿ
ಹುಳುಕಡ್ಡಿ ಆಗಲು ಕಾರಣ
ಟವೆಲ್, ಬಟ್ಟೆ, ಟೋಪಿ, ಮತ್ತು ಶೂಗಳಂತಹ ವಸ್ತುಗಳನ್ನು ತೊಳೆಯದೆ ಬಳಸುವುದು.
ಸೋಂಕು ಇರುವ ವ್ಯಕ್ತಿ ಅಥವಾ ಪ್ರಾಣಿಯನ್ನು ನೇರವಾಗಿ ಸ್ಪರ್ಶಿಸುವುದರಿಂದ ಕೂಡ ಹುಳುಕಡ್ಡಿ ಆಗುತ್ತವೆ.
ಒದ್ದೆ ಇರುವ ಒಳ ಉಡುಪುಗಳ ಬಳಕೆ.
ಕೊಳಕು ಜಾಗದಲ್ಲಿ ಬಟ್ಟೆ ತೊಳೆಯುವುದು.
ಒಬ್ಬರ ಬಟ್ಟೆ, ಸೋಪು, ಬಾಚಣಿಗೆಯನ್ನು ಇನ್ನೊಬ್ಬರು ಬಳಸುವುದು ಕೂಡ ಹುಳುಕಡ್ಡಿ ಸಮಸ್ಯೆಗೆ ಕಾರಣವಾಗಿದೆ.
ಇದರ ನಿಯಂತ್ರಣಕ್ಕೆ ಮನೆಮದ್ದುಗಳು
ಕಹಿ ಬೇವಿನ ಎಲೆಯ ರಸವನ್ನು ಹುಳಕಡ್ಡಿ ಮೇಲೆ ಹಚ್ಚುವುದರಿಂದ ಹಾಗೂ ಎಲೆಯ ರಸವನ್ನು ಪ್ರತಿನಿತ್ಯ ಕುಡಿಯಬೇಕು.
ಹಾಗಲಕಾಯಿ ರಸವನ್ನು ಸೇವನೆ ಮಾಡಬೇಕು
ಶುಭ್ರವಾಗಿ ತೊಳೆದು, ಒಣಗಿಸಿದ ಒಳ ಉಡುಪುಗಳನ್ನು ಬಳಸುವುದರಿಂದ ಹುಳುಕಡ್ಡಿ ಸಮಸ್ಯೆಯನ್ನು ನಿಯಂತ್ರಿಸಬಹುದು.
ಮನೆ ಮದ್ದಿಗೆ ಈ ಸಮಸ್ಯೆ ನಿಯಂತ್ರಣ ಆಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.