ADVERTISEMENT

ಬಿಸಿಲಿನ ಬೇಗೆ ತಣಿಸಲು ಆಹಾರ ಕ್ರಮ ಹೀಗಿರಲಿ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2026, 10:21 IST
Last Updated 11 ಫೆಬ್ರುವರಿ 2026, 10:21 IST
   

ಇನ್ನೇನು ಶಿವರಾತ್ರಿ ಹತ್ತಿರ ಬರುತ್ತಿದೆ. ಹೀಗಾಗಿ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತದೆ. ವಾತಾವರಣದಲ್ಲಿ ಬದಲಾವಣೆಯಾದಂತೆ ಆರೋಗ್ಯದಲ್ಲಿಯೂ ಏರುಪೇರಾಗುತ್ತದೆ. ಹೀಗಾಗಿ ಋತುಗಳ ಬದಲಾವಣೆಯ ಸಂದರ್ಭದಲ್ಲಿ ಆಹಾರದ ಬಗ್ಗೆ ಗಮನ ಹರಿಸುವುದು ಬಹು ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಯಾವ ರೀತಿ ಆಹಾರಗಳನ್ನು ಸೇವಿಸಬೇಕು ಎಂಬ ಮಾಹಿತಿ ಇಲ್ಲಿದೆ.

ಬೇಸಿಗೆಯಲ್ಲಿ ಪಾಲಿಸಬೇಕಾದ ಆಹಾರ ಕ್ರಮಗಳು

ಮಜ್ಜಿಗೆ ಸೇವನೆ

ಬೇಸಿಗೆಯಲ್ಲಿ ಪ್ರತಿದಿನ ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. 1 ಲೋಟ ಮಜ್ಜಿಗೆಗೆ ಅರ್ಧ ಲೋಟ ನೀರು ಸೇರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿರಿಸಲು ಸಹಕರಿಸುತ್ತದೆ. ಜತೆಗೆ ನಿರ್ಜಲೀಕರಣವನ್ನೂ ತಡೆಯುತ್ತದೆ.

ಹಣ್ಣಿನ ಜ್ಯೂಸ್ ಸೇವನೆ

ಹಣ್ಣುಗಳ ಜ್ಯೂಸ್‌ ಬೇಸಿಗೆಯಲ್ಲಿ ದೇಹಕ್ಕೆ ಹಿತವಾಗಿರುತ್ತದೆ. ಕಲ್ಲಂಗಡಿ, ಅನಾನಸ್ ಹಣ್ಣುಗಳ ಜ್ಯೂಸ್, ಲಿಂಬು ಶರಬತ್, ಕಬ್ಬಿನ ಹಾಲು, ಎಳೆ ನೀರನ್ನು ಸೇವನೆ ಮಾಡುವುದರಿಂದ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.

ADVERTISEMENT

ಮೊಳಕೆ ಕಾಳುಗಳ ಸೇವನೆ

ಬೇಸಿಗೆಯಲ್ಲಿ ಹೆಸರುಕಾಳಿನ ಖಾದ್ಯ ಅಥವಾ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣತೆಯನ್ನು ಸಮತೋಲದಲ್ಲಿ ಇರಿಸಲು ಸಹಕರಿಸುತ್ತದೆ.

ರಾಗಿ ಅಂಬಲಿ ಅಥವಾ ಗಂಜಿ ಸೇವಿಸಬಹುದು

ರಾಗಿಯು ಅಧಿಕ ಪೋಷಕಾಂಶವನ್ನು ಹೊಂದಿದೆ. ಬೇಸಿಗೆ ಸಮಯದಲ್ಲಿ ರಾಗಿ ಗಂಜಿ  ಅಥವಾ ಅಂಬಲಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗುವುದನ್ನು ತಡೆಯಬಹುದು.

ಕೋಸಂಬರಿ ಸೇವನೆ

ಕೋಸಂಬರಿ ತಯಾರಿಸಲು ಬಳಸುವ ಸೌತೆಕಾಯಿ, ಹೆಸರುಬೇಳೆ, ದಾಳಿಂಬೆ ಕಾಳು, ಕೊತ್ತಂಬರಿ ಸೊಪ್ಪು,ಕ್ಯಾರೆಟ್‌ನಲ್ಲಿ ಪೋಷಕಾಂಶ ಹೇರಳವಾಗಿರುತ್ತದೆ. ಅಲ್ಲದೆ ಹೆಸರು ಬೇಳೆ ದೇಹದಲ್ಲಿ ಪಿತ್ತವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕೋಸಂಬರಿ ಸೇವನೆ ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.