
ಚಿತ್ರ: ಗೆಟ್ಟಿ
ಮಹಿಳೆಯರು ಸುಂದರವಾಗಿ ಕಾಣಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಈ ಪ್ರಯತ್ನದ ಹೊರತಾಗಿಯೂ ಮುಖದಲ್ಲಿನ ಕಾಂತಿ ಎರಡು ಗಂಟೆ ಇದ್ದರೆ ಹೆಚ್ಚು. ದಿನದ 24 ಗಂಟೆಗಳೂ ಮುಖ ಕಾಂತಿಯುತವಾಗಿರಲು ಕೆಲವು ಸಲಹೆಗಳಿರುವುದಾಗಿ ಡೆಕ್ಕನ್ ಹೆರಾಲ್ಡ್ ಲೇಖನ ಪ್ರಕಟಿಸಿದೆ.
ಹವಾಮಾನದ ಏರಿಳಿತ ಹಾಗೂ ಕೆಲಸದ ಒತ್ತಡಗಳ ನಡುವೆ ತ್ವಚೆಯ ಆರೈಕೆ ಬಹಳ ಮುಖ್ಯ. ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ತ್ವಚೆಯನ್ನು ಆರೋಗ್ಯವಾಗಿಡಲು ಸಹಕಾರಿಯಾಗುತ್ತದೆ.
ತ್ವಚೆಯ ಆರೈಕೆ:
ಪ್ರತಿ ದಿನ ತ್ವಚೆಗೆ ಮಾಯಿಶ್ಚರೈಸಿಂಗ್ ಮತ್ತು ಸನ್‌ಸ್ಕ್ರೀನ್‌ಗಳನ್ನು ಬಳಸುವುದು ಉತ್ತಮ. ರಾತ್ರಿ ಸಮಯದಲ್ಲಿ ದೀರ್ಘಾವಧಿಯ ಸೀರಮ್ ಮತ್ತು ಚರ್ಮದ ಕಾಂತಿ ಹೆಚ್ಚಿಸುವ ಕ್ರೀಮ್ ಬಳಸಬಹುದು. ಗ್ಲೋ ಮಾಸ್ಕ್ (ಜಪಾನೀಸ್ ರೈಸ್ ಮಾಸ್ಕ್) ಅನ್ನು ವಾರಕ್ಕೆ ಎರಡು ಬಾರಿ ಬಳಸುವುದರಿಂದ ನಿಮ್ಮ ಮುಖದ ತ್ವಚೆಗೆ ನೈಸರ್ಗಿಕ ಕಾಂತಿ ನೀಡಲು ಸಹಕಾರಿಯಾಗುತ್ತದೆ.
ಹೆಚ್ಚು ನೀರು ಕುಡಿಯುವುದು:
ಹವಾಮಾನದ ಏರಿಳಿತ ಹಾಗೂ ಕೆಲಸದ ಒತ್ತಡಗಳ ನಡುವೆ ತ್ವಚೆಯ ಆರೈಕೆ ಬಹಳ ಮುಖ್ಯ. ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ತ್ವಚೆಯನ್ನು ಆರೋಗ್ಯವಾಗಿಡಲು ಸಹಕಾರಿಯಾಗುತ್ತದೆ.
ಮುಖದಲ್ಲಿ ಎಣ್ಣೆ (ಆಯಿಲ್ ಫೇಸ್):
ಬೆಳಿಗ್ಗಿನ ಸಮಯದಲ್ಲಿ ಕುಂಕುಮಾದಿ ತೈಲಂ ಅಥವಾ ಜೊಜೊಬಾ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ಸ್ನಾನ ಮಾಡಿ. ಇದು ಧೂಳಿನ ಕಣ ಹಾಗೂ ಮಾಲಿನ್ಯದ ಪ್ರಭಾವದಿಂದಾಗಿ ತ್ವಚೆಯನ್ನು ರಕ್ಷಿಸುತ್ತದೆ.
ತುಟಿಗಳ ಆರೈಕೆ:
ನಿಮ್ಮ ತುಟಿಗಳ ಮೇಲೆ ಲಿಪ್ ಸ್ಕ್ರಬ್ ಬಳಸಿ ಕೆಟ್ಟ ಚರ್ಮದ ಮೇಲ್ಪದರವನ್ನು ತೆಗೆದುಹಾಕಿ. ಇದರಿಂದ ತುಟಿಗಳು ಸುಂದರವಾಗಿ ಕಾಣುತ್ತವೆ. ರಾತ್ರಿ ಸಮಯದಲ್ಲಿ ಗುಲಾಬಿ ರಸವನ್ನು ತುಟಿಗೆ ಲೇಪನ ಮಾಡುವುದರಿಂದ ತುಟಿಗಳು ಹೆಚ್ಚು ಆಕರ್ಷಕ ಹಾಗೂ ಆರೋಗ್ಯಕರವಾಗಿರುತ್ತವೆ. ಲಿಪ್ ಸನ್‌ಸ್ಕ್ರೀನ್ ಸಹ ಬಳಸಬಹುದು.
ಸುಂದರವಾಗಿ ಕಾಣಿಸಿಕೊಳ್ಳಿ:
ನಿಮ್ಮ ಕೂದಲನ್ನು ಸುಂದರವಾಗಿ ಕತ್ತರಿಸಿ ಅಥವಾ ಟ್ರಿಮ್ ಮಾಡಿಸಿ. ಮೊರೊಕನ್ ಎಣ್ಣೆ ಹಚ್ಚುವುದರಿಂದ ಕೂದಲು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.