ADVERTISEMENT

ಲಕ್ಷ್ಮೀನಾರಾಯಣ ಯೋಗ: 2026ರಲ್ಲಿ ಈ 3 ರಾಶಿಯವರಿಗೆ ಭಾರಿ ಅದೃಷ್ಟ

ಎಲ್.ವಿವೇಕಾನಂದ ಆಚಾರ್ಯ
Published 30 ಡಿಸೆಂಬರ್ 2025, 7:02 IST
Last Updated 30 ಡಿಸೆಂಬರ್ 2025, 7:02 IST
   

2026ರಲ್ಲಿ ಕೆಲವು ರಾಶಿಯವರಿಗೆ ಶುಭಯೋಗಗಳು ಕೂಡಿ ಬರಲಿದೆ. ಡಿಸೆಂಬರ್ 20ರಂದು ಧನು ರಾಶಿಗೆ ಶುಕ್ರನ ಪ್ರವೇಶವಾಗಿದೆ. ಡಿಸೆಂಬರ್ 29ರಂದು ಧನುರಾಶಿಯಲ್ಲಿ ಬುಧನ ಪ್ರವೇಶವಾಗಿದೆ. ಹಾಗಾದರೆ ಬುಧ ಹಾಗೂ ಶುಕ್ರ ಗ್ರಹಗಳ ಚಲನೆಯಿಂದ ಯಾವೆಲ್ಲಾ ರಾಶಿಗಳಿಗೆ ಶುಭಫಲ ಲಭಿಸಲಿವೆ ಎಂಬುದನ್ನು ತಿಳಿಯೋಣ.

ಬುಧ ಮತ್ತು ಶುಕ್ರನ ಗ್ರಹಗಳ ಸಂಯೋಜನೆಯಿಂದ ಲಕ್ಷ್ಮೀನಾರಾಯಣ ಯೋಗ ಉಂಟಾಗಲಿದೆ. ಇದರಿಂದ ಮೂರು ರಾಶಿಯವರಿಗೆ ಶುಭಫಲ ಕೂಡಿ ಬರಲಿದೆ.

ವೃಷಭ ರಾಶಿ: ಬುಧ ಹಾಗೂ ಶುಕ್ರನ ಸಂಯೋಗದಿಂದ ವೃಷಭ ರಾಶಿಯವರಿಗೆ ಅತ್ಯಂತ ಶುಭದಾಯಕವಾಗಿದೆ. ವಾಹನ ಖರೀದಿಯ ಯೋಜನೆಗಳು ಯಶಸ್ವಿಯಾಗಲಿದ್ದು, ಕೆಲಸ ಮಾಡುವ ಸ್ಥಳದಲ್ಲಿ ಗೌರವ ಹೆಚ್ಚಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಘನತೆ ಹೆಚ್ಚಾಗುವ ಸಾಧ್ಯತೆಗಳು ಇವೆ.

ADVERTISEMENT

ಕುಂಭ ರಾಶಿ: ಶುಕ್ರ ಮತ್ತು ಬುಧನ ಸಂಯೋಗದಿಂದ ಈ ರಾಶಿಯವರಿಗೆ ದ್ವಿದ್ವಾದಶ ಯೋಗವು ರೂಪಗೊಳ್ಳಲಿದೆ. ಇದರಿಂದಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುವ ನಿರೀಕ್ಷೆ ಇದೆ. ಹಿಂದಿನ ಹೂಡಿಕೆಗಳು ಲಾಭವನ್ನು ನೀಡುವ ಸಾಧ್ಯತೆ ಇದೆ.

ಮೀನ ರಾಶಿ: ಈ ರಾಶಿಗೆ ಸುಮಾರು 200 ವರ್ಷಗಳ ನಂತರ ಬುಧ ಹಾಗೂ ಶುಕ್ರನ ಸಂಯೋಜನೆಯಾಗಿದೆ. ಐಷಾರಾಮಿ ಜೀವನ ದೊರಕುವ ಸಂಭವ ಹೆಚ್ಚಾಗಲಿದೆ. ಇದು ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಕಾಣಲಿದ್ದಾರೆ. ವಿದೇಶಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.