ADVERTISEMENT

‘ಪಾಕ್‌ಗೆ ಜೀವಂತವಾಗಿ ಸಿಕ್ಕ ಭಾರತದ 2ನೇ ಪೈಲಟ್’: ವೈರಲ್ ಆಯ್ತು ಬೆಂಗಳೂರು ವಿಡಿಯೊ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 5:44 IST
Last Updated 1 ಮಾರ್ಚ್ 2019, 5:44 IST
   

ಪಾಕ್‌ ಸೇನೆಗೆ‘ಜೀವಂತವಾಗಿ ಸೆರೆಸಿಕ್ಕ ಭಾರತದ ಎರಡನೇ ಪೈಲಟ್‌’ ಎಂಬ ಒಕ್ಕಣೆಯೊಂದಿಗೆ ಪೈಲಟ್‌ ಒಬ್ಬರ ವಿಡಿಯೊವನ್ನು ಪಾಕಿಸ್ತಾನದಲ್ಲಿನ ಸಾಮಾಜಿಕ ಜಾಲತಾಣಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಆ ವಿಡಿಯೊ ಹಿಂದಿರುವ ವಾಸ್ತವಾಂಶವೇ ಬೇರೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಹಾಗೂ ನೌಶೆರಾ ಪ್ರದೇಶಗಳಲ್ಲಿನ ಭಾರತದ ವಾಯು ವಲಯ ದಾಟಿ ಬುಧವಾರ ಒಳನುಸುಳಿದ್ದ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಭಾರತೀಯ ಯುದ್ಧ ವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಇದೇ ಕಾರ್ಯಾಚರಣೆಯಲ್ಲಿ ಭಾರತದ ಒಂದು ಮಿಗ್‌ 21 ಯುದ್ಧ ವಿಮಾನ ಪತನಗೊಂಡಿತ್ತು. ಅದರ ಫೈಲಟ್‌ ಅಭಿನಂದನ್‌ ಸುರಕ್ಷಿತವಾಗಿ ಪಾಕ್‌ ಗಡಿಯಲ್ಲಿ ಇಳಿದಿದ್ದರು.

ಅವರನ್ನು ವಶಕ್ಕೆ ಪಡೆದಿದ್ದ ಪಾಕಿಸ್ತಾನ ಸೇನೆ ಇಬ್ಬರು ಭಾರತೀಯ ಪೈಲಟ್‌ಗಳನ್ನು ಸೆರೆಹಿಡಿದಿದ್ದೇವೆ ಎಂದು ಹೇಳಿಕೊಂಡಿತ್ತು. ಕೆಲಸಮಯದ ಬಳಿಕ ಪಾಕ್‌ ಸೇನೆಯ ವಕ್ತಾರ,ಒಬ್ಬ ಪೈಲಟ್‌ ಮಾತ್ರವೇ ನಮ್ಮ ವಶದಲ್ಲಿದ್ದಾನೆಎಂದು ಸ್ಪಷ್ಟಪಡಿಸಿದ್ದರು.

ADVERTISEMENT

ಆದರೆ,ಪಾಕ್‌ ತಮ್ಮ ವಶದಲ್ಲಿ ಇಬ್ಬರು ಪೈಲಟ್‌ಗಳಿದ್ದಾರೆ ಎಂದು ಹೇಳುತ್ತಿದ್ದಂತೆ, ‘ಪಾಕ್‌ ಸೇನೆಗೆಇನ್ನೊಬ್ಬ ವಿಂಗ್‌ ಕಮಾಂಡರ್‌ ಜೀವಂತವಾಗಿ ಸೆರೆ ಸಿಕ್ಕಿದ್ದಾನೆ’ ಎನ್ನಲಾದ ವಿಡಿಯೊವೊಂದು ಪಾಕಿಸ್ತಾನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿದೆ.‌

ಯಾವುದು ಆ ವಿಡಿಯೊ?

ಬೆಂಗಳೂರನಲ್ಲಿ ಇತ್ತೀಚೆಗೆ ಮುಕ್ತಾಯವಾದ ಏರೋ ಇಂಡಿಯಾ–2019ಶೋಗಾಗಿ ತಾಲೀಮು ನಡೆಸುವಾಗ ಎರಡು ಸೂರ್ಯ ಕಿರಣವಿಮಾನಗಳು ಪರಸ್ಪರ ಡಿಕ್ಕಿಯಾಗಿ ಭಸ್ಮವಾಗಿದ್ದವು. 2019ರ ಫೆಬ್ರುವರಿ 19ರಂದು ಸಂಭವಿಸಿದ ದುರಂತದಲ್ಲಿ ಪೈಲಟ್‌ಸಾಹಿಲ್ ಗಾಂಧಿ (37) ಮೃತಪಟ್ಟಿದ್ದರು.

ಗಾಯಗೊಂಡಿದ್ದ ವಿಂಗ್ ಕಮಾಂಡರ್ ವಿಜಯ್‌ ಸಾಳ್ಕೆ ಅವರನ್ನು ಕೆಲ ಯುವಕರು ಹಾಗೂ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ಉಪಚರಿಸಿದ್ದರು. ಬಳಿಕ ಅವರನ್ನು ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆವೇಳೆ ವಿಜಯ್‌ ಸಾಳ್ಕೆ ಅವರ ವಿಡಿಯೊ ಸೆರೆಹಿಡಿಯಲಾಗಿತ್ತು. ವಿಡಿಯೊದಲ್ಲಿ ವಿದ್ಯಾರ್ಥಿಗಳುವಿಜಯ್‌ ಅವರನ್ನು ಮಾತನಾಡಿಸುತ್ತಿರುವುದು ಹಾಗೂ ಹಿನ್ನಲೆಯಲ್ಲಿ ‘ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ನೀರು ತರೋಕೆ ಹೇಳಿ’ ಎನ್ನುತ್ತಾ ಕನ್ನಡದಲ್ಲಿ ಮಾತನಾಡಿರುವುದೂ ದಾಖಲಾಗಿದೆ.

ಸದ್ಯ ಆ ವಿಡಿಯೊ ಸುಳ್ಳು ಮಾಹಿತಿಯೊಡನೆಹರಿದಾಡುತ್ತಿದೆ.

***

ಇನ್ನಷ್ಟು ಓದು
*
ವಿಂಗ್ ಕಮಾಂಡರ್ ಅಭಿನಂದನ್‌ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ...
*ಪಾಕಿಸ್ತಾನ ವಶದಲ್ಲಿ ಪೈಲಟ್‌: ’ಒಪ್ಪಂದ ಅವಕಾಶವಿಲ್ಲ, ತಕ್ಷಣ ಬಿಡುಗಡೆ ಮಾಡಿ’–ಭಾರತ
*ನೀವು ನಿದ್ರೆ ಮಾಡ್ತೀರೋ ಇಲ್ವೋ; ಅಭಿನಂದನ್ ಅವರನ್ನು ಕರೆತನ್ನಿ: ನಟಿ ರಮ್ಯಾ
*ಭಾರತದ ಉರಿ ವಲಯದ ಮೇಲೆ ಪಾಕಿಸ್ತಾನದ ಶೆಲ್‌ ದಾಳಿ ​
*ಗಡಿದಾಟಿದ ಪಾಕ್‌ ಯುದ್ಧ ವಿಮಾನಗಳು; ಭಾರತದ ಸೇನಾ ವಲಯದ ಮೇಲೆ ಬಾಂಬ್‌ ದಾಳಿ
*ಜಮ್ಮು–ಕಾಶ್ಮೀರದಲ್ಲಿ ಭಾರತೀಯ ವಾಯುಪಡೆಯ ಮಿಗ್‌ ವಿಮಾನ ಪತನ; ಇಬ್ಬರು ಪೈಲಟ್‌ ಸಾವು
*ಶ್ರೀನಗರ ಸೇರಿ ಐದು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನ ಸಂಚಾರಕ್ಕೆ ನಿರ್ಬಂಧ
*ಬಲಾಕೋಟ್‍ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್‍ಗೆ ಪ್ರತ್ಯುತ್ತರ ನೀಡಿದ ಭಾರತ
*ವೈಮಾನಿಕ ದಾಳಿಯಲ್ಲಿ ಹತರಾಗಿದ್ದು 200 ಉಗ್ರರು!
*ಪಾಕ್‍ ವಿರುದ್ಧ ವೈಮಾನಿಕ ದಾಳಿ ನಡೆಸಿದ ಐಎಎಫ್‍ಗೆ ಟ್ವೀಟ್ ಪ್ರಶಂಸೆ
*ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ: ಸೀಬರ್ಡ್ ನೌಕಾನೆಲೆಯಲ್ಲಿ ಭದ್ರತೆ ಹೆಚ್ಚಳ
*ಇಂದಿನ ದಾಳಿ ನವ ಭಾರತದ ಸಂಕಲ್ಪದ ಮುನ್ನುಡಿ: ಅಮಿತ್‌ ಶಾ
*ಪಾಕಿಸ್ತಾನ ಇನ್ನಾದರೂ ತೆಪ್ಪಗಿರಲಿ: ಪ್ರಹ್ಲಾದ ಜೋಶಿ
*ಮೋದಿ ನುಡಿದಂತೆ ನಡೆದಿದ್ದಾರೆ; ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ -ಸದಾನಂದ ಗೌಡ
*ಉಗ್ರರ ಶಿಬಿರಗಳನ್ನೇ ಗುರಿಯಾಗಿರಿಸಿ ಕಾರ್ಯಾಚರಣೆ ಮಾಡಲಾಗಿದೆ: ವಿಜಯ್ ಗೋಖಲೆ
*ಪುಲ್ವಾಮಾ ದಾಳಿಗೆ ಪ್ರತೀಕಾರ: ಉಗ್ರರ ವಿರುದ್ಧ ಭಾರತ ‘ಯುದ್ಧ’
*ನಮ್ಮ ಸರ್ಕಾರ ಬಳಸುತ್ತಿರುವ ‘ನಾನ್–ಮಿಲಿಟರಿ ಆಕ್ಷನ್’ ಪದಗಳ ಅರ್ಥವೇನು
*ಸಾರ್ವತ್ರಿಕ ಚುನಾವಣೆ ಗಮನದಲ್ಲಿರಿಸಿ ವಾಯುದಾಳಿ ನಡೆಸಿದ ಭಾರತ: ಪಾಕಿಸ್ತಾನ ಆರೋಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.