ADVERTISEMENT

ಉಲಾನ್‌ಬಾತರ್‌ನಲ್ಲಿ ಸಿಲುಕಿರುವ 228 ಪ್ರಯಾಣಿಕರನ್ನು ಕರೆತರಲು ಏರ್‌ಇಂಡಿಯಾ ವಿಮಾನ

ಪಿಟಿಐ
Published 4 ನವೆಂಬರ್ 2025, 9:54 IST
Last Updated 4 ನವೆಂಬರ್ 2025, 9:54 IST
<div class="paragraphs"><p>ಏರ್‌ಇಂಡಿಯಾ</p></div>

ಏರ್‌ಇಂಡಿಯಾ

   

ನವದೆಹಲಿ: ಸ್ಯಾನ್‌ಫ್ರಾನ್ಸಿಸ್ಕೊ – ದೆಹಲಿ ಮಾರ್ಗದಲ್ಲಿ 228 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಏರ್‌ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಮಂಗೋಲಿಯಾದ ರಾಜಧಾನಿ ಉಲಾನ್‌ಬಾತರ್‌ನಲ್ಲಿ ಸೋಮವಾರ ಸಂಜೆ ಬಂದಿಳಿದಿತ್ತು. ಅಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ಮತ್ತೊಂದು ವಿಮಾನವನ್ನು ಏರ್ ಇಂಡಿಯಾ ಕಳುಹಿಸಲಿದೆ ಎಂದು ವರದಿಯಾಗಿದೆ.

ಈ ವಿಮಾನವು ಬುಧವಾರ ಬೆಳಿಗ್ಗೆ ಭಾರತಕ್ಕೆ ಮರಳಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ADVERTISEMENT

ಏರ್‌ ಇಂಡಿಯಾಗೆ (AI174m) ಸೇರಿದ ಬೋಯಿಂಗ್ 777 ವಿಮಾನದಲ್ಲಿ 17 ಸಿಬ್ಬಂದಿ ಹಾಗೂ 228 ಪ್ರಯಾಣಿಕರು ಸೇರಿ ಒಟ್ಟು 245 ಜನ ಇದ್ದರು. ಸ್ಯಾನ್‌ಫ್ರಾನ್ಸಸಿಸ್ಕೊದಿಂದ ಈ ವಿಮಾನವು ನ. 2ರಂದು ಹೊರಟಿತ್ತು. ಕೋಲ್ಕತ್ತ ಮಾರ್ಗವಾಗಿ ಈ ವಿಮಾನವು ದೆಹಲಿಗೆ ಪ್ರಯಾಣಿಸುತ್ತಿತ್ತು.

ಆದರೆ ಮಾರ್ಗ ಮಧ್ಯೆ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಉಲಾನ್‌ಬಾತರ್‌ಗೆ ಬಂದಿಳಿಯಿತು.

ಇಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವನ್ನು ಏರ್ ಇಂಡಿಯಾ ಕಳುಹಿಸುತ್ತಿದೆ. ಈ ಕುರಿತಂತೆ ಸ್ಥಳೀಯ ಅಧಿಕಾರಿಗಳು ಮತ್ತು ಭಾರತೀಯ ರಾಯಭಾರ ಕಚೇರಿಗೆ ಕಂಪನಿ ಮಾಹಿತಿ ನೀಡಿದೆ. ಪ್ರಯಾಣಿಕರಿಗೆ ವಸತಿ ಸೌಕರ್ಯ ನೀಡಲಾಗಿದೆ ಎಂದೂ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.