ಚಂದ್ರಬಾಬು ನಾಯ್ಡು
ವಿಶಾಖಪಟ್ಟಣ: ‘ದಕ್ಷಿಣ ಭಾರತದ ಹೈದರಾಬಾದ್, ಅಮರಾವತಿ, ಚೆನ್ನೈ ಹಾಗೂ ಬೆಂಗಳೂರು ನಡುವೆ ಬುಲೆಟ್ ರೈಲು ಸಂಪರ್ಕ ಅನುಷ್ಠಾನಗೊಳ್ಳಲಿದೆ’ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಶುಕ್ರವಾರ ಹೇಳಿದ್ದಾರೆ.
ಭಾರತ ಆಹಾರ ಉತ್ಪಾದನಾ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.
‘ದಕ್ಷಿಣದ ಭಾರತದ ಈ ನಾಲ್ಕು ಪ್ರಮುಖ ನಗರಗಳ ಐದು ಕೋಟಿ ಜನರಿಗೆ ಬುಲೆಟ್ ರೈಲಿನಿಂದ ನೆರವಾಗಲಿದೆ. ಅತಿ ಶೀಘ್ರದಲ್ಲಿ ದಕ್ಷಿಣ ಭಾರತಕ್ಕೆ ಈ ಸೌಲಭ್ಯ ಲಭ್ಯವಾಗಲಿದೆ’ ಎಂದಿದ್ದಾರೆ.
‘ಸರ್ವೆಗೆ ಈಗಾಗಲೇ ಆದೇಶಿಸಲಾಗಿದೆ. ಹೈದರಾಬಾದ್‌ನಿಂದ, ಚೆನ್ನೈ, ಅಮರಾವತಿ, ಬೆಂಗಳೂರು ಈ ನಾಲ್ಕೂ ನಗರಗಳು ಜಗತ್ತಿನ ಅತಿ ದೊಡ್ಡ ಮಾರುಕಟ್ಟೆಯಾಗಲಿವೆ. ಇವುಗಳನ್ನು ಬುಲೆಟ್ ರೈಲು ಸಂಪರ್ಕಿಸಲಿದೆ. ಇದು ಕಾರ್ಯರೂಪಕ್ಕೆ ಬಂದ ನಂತರ ಲಾಜಿಸ್ಟಿಕ್ ಕ್ಷೇತ್ರದ ಬೆಳವಣಿಗೆಯನ್ನು ಜನರು ಪ್ರತ್ಯಕ್ಷವಾಗಿ ನೋಡಬಹುದು’ ಎಂದು ನಾಯ್ಡು ಹೇಳಿದ್ದಾರೆ.
‘ಬುಲೆಟ್ ರೈಲಿನ ಮಾರ್ಗಕ್ಕೆ ಹೊಂದಿಕೊಂಡಂತೆ ದಕ್ಷಿಣದ ರಾಜ್ಯಗಳು ದೊಡ್ಡ ಪ್ರಮಾಣದಲ್ಲಿ ರಸ್ತೆ ಸಂಪರ್ಕವನ್ನೂ ಅಭಿವೃದ್ಧಿಪಡಿಸುತ್ತಿವೆ. ಅತ್ಯದ್ಭುತ ನಿರ್ವಹಣೆ, ಸೌಕರ್ಯವನ್ನು ಇವು ಹೊಂದಿರಲಿವೆ. ಒಳಭಾಗದ ರಸ್ತೆಗಳೂ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಪೂರಕವಾಗಿ ಅಭಿವೃದ್ಧಿಯಾಗಲಿವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.